

ರಾಯಚೂರು: ರಾಮ ಮಂದಿರ ಉದ್ಘಾಟನೆ ಖಾಸಗಿ ಕಾರ್ಯಕ್ರಮವಾಗಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಚಿವರು ಪಾಲ್ಗೊಳ್ಳುವುದು ಬೇಡ ಸೇರಿದಂತೆ ಒಟ್ಟು 19 ನಿರ್ಣಯಗಳನ್ನು ಟಿಯುಸಿಐ ರಾಜ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಗಿದೆ.
ನಗರದ ಜೆಸಿ ಭವನದಲ್ಲಿ ಬುಧವಾರ ಸಂಜೆ ಜರುಗಿದ ಪ್ರತಿನಿ ಅವೇಶನದಲ್ಲಿ ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಮಂಡಿಸಿದ ನಿರ್ಣಯಗಳಿಗೆ ಪದಾಕಾರಿಗಳು ಅನುಮೋದನೆ ನೀಡಿದ್ದು, ಜತೆಗೆ ಹೊಸ ರಾಜ್ಯಾಧ್ಯಕ್ಷರನ್ನಾಗಿ ಎಂ.ಡಿ.ಅಮೀರ್ ಅಲಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ರಾಜ್ಯ ಸರ್ಕಾರ ಕೂಡಲೇ ಜಾತಿ ಸಮೀಕ್ಷೆ ವರದಿಯನ್ನು ಪ್ರಕಟಿಸಬೇಕು. ಕಾಪೋರೇಟ್ ಬಂಡವಾಳಶಾಹಿ ಮತ್ತು ್ಯಾಸಿಸಂ ವಿರುದ್ಧ ಚಳುವಳಿ ತೀವ್ರಗೊಳಿಸಬೇಕು. ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಬೇಕು. ಕಾರ್ಮಿಕರಿಗೆ 31 ಸಾವಿರ ರೂ. ಕನಿಷ್ಠ ವೇತನ ನಿಗದಿಪಡಿಸಬೇಕು. ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ರದ್ದುಗೊಳಿಸಬೇಕು ಸೇರಿದಂತೆ ಹಲವು ನಿರ್ಣಯಗಳನ್ನು ಅವೇಶನದಲ್ಲಿ ಕೈಗೊಳ್ಳಲಾಯಿತು.
ಅವೇಶನದಲ್ಲಿ ಸಂಘಟನೆ ಪದಾಕಾರಿಗಳಾದ ಎಂ.ಡಿ.ಅಮೀರ್ ಅಲಿ, ಚಿನ್ನಪ್ಪ ಕೊಟ್ರಿಕಿ, ಎಂ.ಗಂಗಾಧರ, ಬಿ.ಕೆ.ಗೋಪಾಲ, ಡಿ.ಕೆ.ಲಿಂಗಸುಗೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪದಾಕಾರಿಗಳು ಉಪಸ್ಥಿತರಿದ್ದರು.