ಡೌನ್ಸ್ ಸಿಂಡ್ರೋಮ್ಸ್‌ಗೆ ಪ್ರಾಥಮಿಕ ಚಿಕಿತ್ಸೆ ಅಗತ್ಯ

h20-kle medicle college
Published on

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯ ವತಿಯಿಂದ ಗುರುವಾರ ವಿಶ್ವ ಡೌನ್ಸ್ ಸಿಂಡ್ರೋಮ್ಸ್ ದಿನವನ್ನು ನಗರದ ಕೆಎಲ್ಇ ಸುಚಿರಾಯು ಆಸ್ಪತ್ರೆಯಲ್ಲಿ ಗುರುವಾರ ಏರ್ಪಡಿಸಲಾಗಿತ್ತು.

ಮಕ್ಕಳ ತಜ್ಞ ಡಾ. ಶ್ರೀನಾಥ ಮುಗಳಿ ಮಾತನಾಡಿ, ಡೌನ್ಸ್ ಸಿಂಡ್ರೋಮ್ಸ್ ಎಂದರಿದು ದೈಹಿಕ ಬೆಳವಣಿಯ ವಿಳಂಬ ಹಾಗೂ ಬೌದ್ಧಿಕ ಅಂಗವೈಕಲ್ಯವನ್ನು ಹೊಂದಿರುವ ಕಾಯಿಲೆ. ತಡೆಯಲು ಮುಂಜಾಗ್ರತೆ ಜತೆಗೆ ವೈದ್ಯರ ಮಾರ್ಗದರ್ಶನವೂ ಅಗತ್ಯ ಎಂದರು.

ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಎಂ.ಜಿ. ಹಿರೇಮಠ ಮಾತನಾಡಿ, ಡೌನ್ಸ್ ಸಿಂಡ್ರೋಮ್ ಕಾಯಿಲೆಗೆ ಪ್ರಾಥಮಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.

ಬೆಳಗಾವಿ ಕಹೇರದ ರಿಜಿಸ್ಟ್ರಾರ್ ಡಾ.ಎಂ.ಎಸ್. ಗಣಾಚಾರಿ, ನಿದೇಶಕ ಡಾ.ವಿ.ಡಿ. ಪಾಟೀಲ, ಉಪ ಪ್ರಾಚಾರ್ಯೆ ಡಾ. ಶಾರದಾ ಮೆಟಗುಡ್ಡ, ಡಾ.ಪಿ.ವಿ. ಕಂಚಿ, ಡಾ. ದೇವರಾಜ ರಾಯಚೂರ, ಡಾ. ಶ್ರೀಹರ್ಷ ಬಡಿಗೇರ, ಡಾ. ಭರತ ಕಟ್ಟಿ, ಡಾ. ಪ್ರಭುದೇವ ಹಸಬಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net