ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆ ನೀಗಿಸುವಂತೆ ಬಿಇಒಗೆ ನಾಗರಬೆಂಚಿ ನಿವಾಸಿಗಳ ಮನವಿ

Nagarabenchi Villagers Appeal for Teachers
ಲಿಂಗಸುಗೂರಿನಲ್ಲಿ ಬಿಇಒ ಹುಂಬಣ್ಣ ರಾಠೋಡರಿಗೆ ನಾಗರಬೆಂಚಿ ಗ್ರಾಮಸ್ಥರು ಸೊಮವಾರ ಮನವಿ ಸಲ್ಲಿಸಿದರು.
Published on

ಲಿಂಗಸುಗೂರು: ಮಸ್ಕಿ ತಾಲೂಕಿನ ನಾಗರಬೆಂಚಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ನಿಯೋಜಿಸುವಂತೆ ಒತ್ತಾಯಿಸಿ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಸೇರಿ ಗ್ರಾಮಸ್ಥರು ಬಿಇಒ ಹುಂಬಣ್ಣ ರಾಠೋಡರಿಗೆ ಸೋಮವಾರ ಮನವಿ ಸಲ್ಲಿಸಿದರು.

ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 157 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಬ್ಬರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬರು ಪ್ರಭಾರ ಮುಖ್ಯಶಿಕ್ಷಕರಿದ್ದು, ಕಚೇರಿ ಕೆಲಸ, ದಾಖಲಾತಿ ನಿರ್ವಹಣೆ ಇತರೆ ಕೆಲಸಗಳಿಂದ ಬೋಧನೆಗೆ ಸಮಯಾವಕಾಶ ಸಿಗುತ್ತಿಲ್ಲ. ಇನ್ನೊಬ್ಬ ಶಿಕ್ಷಕಿ ಕೆಲ ದಿನಗಳಲ್ಲಿ ಹೆರಿಗೆ ರಜೆ ನಿಮಿತ್ತ ತೆರಳಲಿದ್ದು ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರಲಿದೆ. ತಕ್ಷಣ ಶಾಲೆಗೆ ಮೂವರು ಶಿಕ್ಷಕರನ್ನು ನಿಯೋಜನೆ ಮಾಡಬೇಕೆಂದು ಆಗ್ರಹಿಸಿದರು.

ಗ್ರಾಮಸ್ಥರಾದ ಶರಣಬಸವ, ಮಹಾಂತೇಶ, ದುರುಗೇಶ, ಗ್ಯಾನಪ್ಪ, ತೋಮೇಶ, ಜಮದಗ್ನಿ, ದುರುಗಪ್ಪ, ವೆಂಕಟೇಶ, ಶಿವಕುಮಾರ, ಮಹಾಂತೇಶ, ಆಂಜನೇಯ, ವೀರೇಶ, ಮಲ್ಲಿಕಾರ್ಜುನ, ಹನುಮಪ್ಪ, ಶರಬಣ್ಣ, ವೀರನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net