ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಆಯ್ಕೆ.

harapanahalli
ಹರಪನಹಳ್ಳಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಬಿ.ರಾಜಶೇಖರ ಹಾಗೂ ಕಾರ್ಯದರ್ಶಿಯಾಗಿ ನಟರಾಜ ಆಯ್ಕೆಯಾಗಿದ್ದಾರೆ.
Published on

ಹರಪನಹಳ್ಳಿ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಆಯ್ಕೆಯ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಮಂಗಳವಾರ ಮಾದಾಪುರ ಶಾಲೆಯ ಶಿಕ್ಷಕ ಬಿ.ರಾಜಶೇಖರ (ಅ) ಮತ್ತು ಯಲ್ಲಾಪುರ ಶಾಲೆಯ ಶಿಕ್ಷಕ ನಟರಾಜ (ಕಾ) ನೇಮಕಗೊಂಡಿದ್ದಾರೆ.

ಕಥೆಗಾರ ಮಂಜುನಾಥ (ಅ) ಹಾಗೂ ಎಂ.ಷರೀಫ್(ಕಾ)ರವರು ರಾಜಿನಾಮೆ ಸಲ್ಲಿಸಿದ್ದರು. ತೆರವಾದ ಸ್ಥಾನಗಳಿಗೆ ಈ ಆಯ್ಕೆ ಜರುಗಿತು.
ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್,

ರಾಜ್ಯ ಉಪಾಧ್ಯಕ್ಷೆ ಜಿ.ಪದ್ಮಲತಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ರಾಮಪ್ಪ, ಪದಾಧಿಕಾರಿಗಳಾದ ದೇವೇಂದ್ರಗೌಡ, ಸುಬ್ಬಣ್ಣ, ಪದ್ಮರಾಜ ಜೈನ್, ಕೊಟ್ರಮ್ಮ, ಬಂದಮ್ಮ. ಮಹದೇವಮ್ಮ, ಪಿ.ಅಂಜಿನಪ್ಪ, ಅರ್ಜುನ ಪರಸಪ್ಪ, ಮಾದಿಹಳ್ಳಿ ಮಂಜುನಾಥ, ಗುರುಪ್ರಸಾದ್, ಚಂದ್ರಮೌಳಿ, ಎಂ.ರಮೇಶ, ಬಂಡಿ ಬಸವರಾಜ, ಸೊಪ್ಪಿನ ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net