

ಗುರುಪುರ: ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಹವ್ಯಾಸ ಬೆಳೆಸಿಕೊಂಡು ಶೈಕ್ಷಣಿಕ ಪ್ರಗತಿಯಲ್ಲಿ ತೊಡಗಿಸಿಕೊಳ್ಳಬೇಕು. ಅಡಗಿಸಿಕೊಳ್ಳುವುದರಿಂದ ಅಥವಾ ತಪ್ಪಿಸಿಕೊಳ್ಳುವುದರಿಂದ ಸಾಧನೆ ಅಸಾಧ್ಯ ಎಂದು ಶಾಲಾ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು ಹೇಳಿದರು.
ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಜೂ.2ರಂದು ಆಯೋಜಿಸಲಾದ 2005-26ನೇ ಸಾಲಿನ ಪ್ರಾಥಮಿಕ, ಪ್ರೌಢಶಾಲಾ ಪ್ರಾರಂಭೋತ್ಸವಕ್ಕೆ ಶಾಲಾ ಆಡಳಿತ ಮಂಡಳಿ ಸದಸ್ಯ ಉದಯ ಕುಮಾರ್ ಕುಡುಪು ಚಾಲನೆ ನೀಡಿದರು.
ಹಳೇ ವಿದ್ಯಾರ್ಥಿನಿ ದೇವಿಕಾ ವಿ.ದುಬೈ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಛತ್ರಿ ವಿತರಿಸಿದರು. ಶೀತಲ್ ಬೆಂಗಳೂರು ಲೇಖನಿ ಸಾಮಗ್ರಿ, ಸಿಹಿತಿಂಡಿ ಹಂಚಿದರು.
ಪ್ರೌಢಶಾಲಾ ಮುಖ್ಯಶಿಕ್ಷಕ ರಮೇಶ್ ಆಚಾರ್ಯ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ವಿಠಲ್ ವಾಗ್ಮೋರೆ, ಶಿಕ್ಷಕಿ ಹರಿಣಾಕ್ಷಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಹರಿಣಾಕ್ಷಿ ವಂದಿಸಿದರು.