

ಮುನವಳ್ಳಿ: ಪಟ್ಟಣದ ಸುಮಾರು 33 ಸಮುದಾಯದವರು ಬಳಕೆ ಮಾಡುವ ಸ್ಮಶಾನಕ್ಕೆ ಹೊಸ ರೂಪಕೊಟ್ಟು ನವೀಕರಿಸಲಾಗುತ್ತಿದ್ದು, ಐದಾರು ತಿಂಗಳಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.
ಪಟ್ಟಣದ ತೆಗ್ಗಿಹಾಳ ರಸ್ತೆಯ ಸ್ಮಶಾನ ಅಭಿವದ್ಧಿ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ 1 ಕೋಟಿ ರೂ. ಅನುದಾನದಲ್ಲಿ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪಟ್ಟಣದ ಈ ಸ್ಮಶಾನಕ್ಕೆ ಇನ್ನೂ ಹೆಚ್ಚುವರಿಯಾಗಿ 1.5 ಕೋಟಿ ರೂ. ಅನುದಾನ ತರುವ ಮೂಲಕ ಸಂಪೂರ್ಣವಾಗಿ ಅಭಿವದ್ಧಿಪಡಿಸಲಾಗುವುದು ಎಂದರು.
2026ರ ರಾಜ್ಯ ಸರ್ಕಾರದ ಬಜೆಟ್ನಲ್ಲಿ ಮುನವಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಲು ಅನುಮೋದನೆ ಪಡೆದು ಮೇಲ್ದರ್ಜೆಗೇರಿಸಲಾಗುವುದು. ಮುಖ್ಯರಸ್ತೆಯ ಅಲಂಕಾರಿಕ ವಿದ್ಯುತ್ ದೀಪ ಅಳವಡಿಕೆಗೆ ಮತ್ತೆ ಟೆಂಡರ್ ಕರೆದು ಕಾಮಗಾರಿ ಪ್ರಾರಂಭ ಮಾಡಲಾಗುವುದು. ಮುನವಳ್ಳಿ ಅಭಿವದ್ಧಿಗೆ ಸಂಬಂಧಪಟ್ಟಂತೆ ಅನೇಕ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತದೆ ಎಂದರು.
ಪುರಸಭೆ ಅಧ್ಯ ಸಿ.ಬಿ.ಬಾಳಿ, ಸವದತ್ತಿ ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ಪಿಕೆಪಿಎಸ್ ಅಧ್ಯ ಅಂಬರೀಷ ಯಲಿಗಾರ, ಪುರಸಭೆ ಸದಸ್ಯರಾದ ಡಿ.ಡಿ.ಣಕಿನ್ನೂರಿ, ಮೀರಾಸಾಬ್ ವಟ್ನಾಳ, ಶ್ರೀಶೆಲ ನೇಗಿನಾಳ, ಈಶ್ವರ ಕರೀಕಟ್ಟಿ, ಹನಮಂತ ಹಿರೇಮೇತ್ರಿ, ಸಮೀವುಲ್ಲಾ ಚೂರಿಖಾನ್, ಪಂಚು ಬಾರಕೇರ, ಲುಕ್ಮಾನ್ ದನದಮನಿ, ವಿನಾಯಕ ಕಟ್ಟೇಕಾರ, ನಾಗಪ್ಪ ಕಾಮಣ್ಣವರ, ಅಶೋಕ ಕದಂ, ಪ್ರಕಾಶ ಕಾಮಣ್ಣವರ, ಮೌನೇಶ ಬಡಿಗೇರ, ಪುರಸಭೆ ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ ಇತರರಿದ್ದರು.