ಪ್ರಾಥಮಿಕ ಹಂತದ ಶಿಕ್ಷಣ ಭದ್ರಬುನಾದಿ

20hgr1
ಮಾರಗೌಡನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಕೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
Published on

ಹಲಗೂರು: ವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಜೀವನ ರೂಪಿಸಿಕೊಳ್ಳುವುದಕ್ಕೆ ಪ್ರಾಥಮಿಕ ಶಾಲಾ ಹಂತ ಭದ್ರಬುನಾದಿ ಆಗಿದೆ ಎಂದು ಹೋಬಳಿಯ ಶಿಕ್ಷಣ ಸಂಯೋಜಕ ರವಿಕುಮಾರ್ ತಿಳಿಸಿದರು.

ಮಾರಗೌಡನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ಕಲಿಕೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಶಾಲೆ ನಮ್ಮ ತಾಲೂಕಿಗೆ ಮಾದರಿಯಾಗಿದೆ. ಈ ಶಾಲೆಯ ಮಕ್ಕಳಲ್ಲಿ ಸೃಜನಶೀಲತೆ ಉಂಟುಮಾಡಲು ಶಿಕ್ಷಕರು ಸಾಕಷ್ಟು ಶ್ರಮವಹಿಸಿದ್ದಾರೆ. ಮಕ್ಕಳು ತಯಾರಿಸಿರುವ ಮಾದರಿಗಳು ಉತ್ತಮವಾಗಿವೆ. ಮಳವಳ್ಳಿ ತಾಲೂಕಿನಲ್ಲಿ ಹೆಸರುವಾಸಿಯಾದ ಈ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮದ ಮುಖಂಡ ಜವರೇಗೌಡ ಮಾತನಾಡಿ, ಈ ಶಾಲೆ ರಾಜ್ಯಮಟ್ಟದಲ್ಲೇ ಹೆಸರುವಾಸಿಯಾಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಇಲ್ಲಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದ ಹೆಸರುವಾಸಿಯಾಗಿದೆ ಎಂದರು.

ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬಸವರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ತೊರೆಕಾಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಸಿ.ಗೌಡ, ಗ್ರಾಮ ಅಭಿವೃದ್ಧಿ ಅಧಿಕಾರಿ ಪ್ರಸಾದ್, ಎಸ್‌ಡಿಎಂಸಿ ಅಧ್ಯಕ್ಷ ಚಿಕ್ಕಸ್ವಾಮಿ, ಉಪಾಧ್ಯಕ್ಷ ಉಮೇಶ್, ಮುಖ್ಯ ಶಿಕ್ಷಕ ಶಿವಮಲ್ಲಯ್ಯ, ಪುಟ್ಟಸ್ವಾಮಿ, ಬಸವರಾಜು, ಜಿ.ಎಸ್.ಕೃಷ್ಣ, ವಿಷಕಂಠೇಗೌಡ, ಪುಟ್ಟರಾಜು, ಶಿಕ್ಷಕರಾದ ಸುರೇಶ್, ಎನ್.ವೈ.ಇಂದುಮತಿ, ಬಿ. ಎನ್.ಶ್ವೇತಾು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net