ದೇವರ ಚಿನ್ನ ಕದ್ದ ಅರ್ಚಕ ತಿರುವಂತಪುರದಲ್ಲಿ ಬಂಧನ

Theft
Published on

ಮಂಜೇಶ್ವರ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಬೆಟ್ಟುವಿನ ಶ್ರೀ ಮಂಗೇಶ ಮಹಾಲಕ್ಷ್ಮೀ ಶಾಂತದುರ್ಗಾ ದೇವಸ್ಥಾನದಲ್ಲಿ ವಿಗ್ರಹಕ್ಕೆ ತೊಡಿಸಲಾದ ಐದೂವರೆ ಪವನ್ ಚಿನ್ನ ಎಗರಿಸಿ ಪರಾರಿಯಾಗಿದ್ದ ಅರ್ಚಕ ತಿರುವನಂತಪುರ ನಿವಾಸಿ ದೀಪಕ್ ನಂಬೂದರಿ ಎಂಬಾತನನ್ನು ತಿರುವನಂತಪುರದಲ್ಲಿ ಬಂಧಿಸಲಾಗಿದೆ.

ದೇವರಿಗೆ ತೊಡಿಸಿದ್ದ ಚಿನ್ನವನ್ನು ಆರೋಪಿ ದೀಪಕ್ ನಂಬೂದರಿ ಎಗರಿಸಿ ಅದೇ ಮಾದರಿಯ ನಕಲಿ ಆಭರಣ ತೊಡಿಸಿ ಪರಾರಿಯಾಗಿದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಅ.27ರಿಂದ ಈತನನ್ನು ಇಲ್ಲಿ ಪೂಜೆಗೆ ನೇಮಿಸಲಾಗಿದ್ದು, 29ರಂದು ಸಂಜೆ ಹೊಸಂಗಡಿ ಪೇಟೆಗೆ ತೆರಳುವುದಾಗಿ ದೇವಸ್ಥಾನದ ಸೆಕ್ಯುರಿಟಿಗೆ ತಿಳಿಸಿ ತೆರಳಿದಾತ ವಾಪಸಾಗಿರಲಿಲ್ಲ. ಈತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೂಜೆಗಾಗಿ ಸಿದ್ದಾಪುರದ ಶ್ರೀಧರ ಭಟ್ ಎಂಬುವರನ್ನು ನೇಮಿಸಲಾಗಿತ್ತು. ಅವರು ಪೂಜೆಗೆ ಗರ್ಭಗುಡಿಗೆ ತೆರಳಿದಾಗ ದೇವರ ವಿಗ್ರಹದಲ್ಲಿ ಹೊಳಪಿನಿಂದ ಕೂಡಿದ ಹೊಸ ಆಭರಣ ಕಂಡುಬಂದಿದ್ದು, ಈ ಬಗ್ಗೆ ಮೊಕ್ತೇಸರರಲ್ಲಿ ವಿಚಾರಿಸಿದಾಗ ಆಭರಣ ಬದಲಾಗಿರುವುದು ಗಮನಕ್ಕೆ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net