

ವಿಜಯವಾಣಿ ಸುದ್ದಿಜಾಲ ಧಾರವಾಡ
ಪರಿಸರ ವಿಜ್ಞಾನಿ ಪ್ರೊ. ಮಾಧವ ಗಾಡ್ಗೀಳರ ಆತ್ಮಕಥೆಯಾದ "ಏರುಘಟ್ಟದ ನಡಿಗೆ' ಮಹಾಕೃತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಪತ್ರಕರ್ತ ಹರ್ಷವರ್ಧನ ಶೀಲವಂತ ಹೇಳಿದರು.
ನಗರದ ಅನ್ವೇಷಣ ಕೂಟ ವತಿಯಿಂದ ಸಾಧನಕೇರಿಯ ಚೈತ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರೊ. ಮಾಧವ ಗಾಡ್ಗೀಳರ ಆತ್ಮಕಥೆ "ಏರುಘಟ್ಟದ ನಡಿಗೆ' ಕೃತಿ ಕುರಿತು ಅವರು ಮಾತನಾಡಿದರು.
ಏರುಘಟ್ಟದ ನಡಿಗೆಯನ್ನು ಅಕಾಲಿಕವಾಗಿ ಸಂಶಯಾಸ್ಮದ ರೀತಿ ಮೃತಪಟ್ಟ ಗೋವಾದ ಬಿಸ್ಮಾರ್ಕ್ ಡಿಯಾಸ್ ಎಂಬ ಪರಿಸರ ಹೋರಾಟಗಾರನಿಗೆ ಅರ್ಪಿಸಿರುವುದೇ ಬಲ್ಲವರ, ಮಹಾಜ್ಞಾನಿಗಳ ಸರಳತೆಗೊಂದು ಉದಾಹರಣೆಯಾಗಿ ನಿಲ್ಲುತ್ತದೆ. ನೂರಾರು ವಿಷಯಗಳು, ಲೇಖಕರ ಔಚಿತ್ಯಪೂರ್ಣ ಉಲ್ಲೆಖಗಳು, ಸಾಧನೆಗಳಿಗೆ ಸಂದ ಪ್ರಶಸ್ತಿಗಳೇ ಮಾಧವ ಗಾಡ್ಗೀಳರ ಸತತ ಪರಿಶ್ರಮಗಳಿಗೆ ಸಾಕ್ಷಿ ಎಂದರು.
ಶಾರದಾ ಗೋಪಾಲ ದಾಬಡೆ ಮಾತನಾಡಿ, ಏರುಟ್ಟದ ನಡಿಗೆ ಕೃತಿಯನ್ನು ಕನ್ನಡಕ್ಕೆ ಅನುವಾದಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಈ ಕಾರ್ಯದಿಂದ ಅನೇಕ ಸಂಗತಿ ತಿಳಿಯಲು ಸಾಧ್ಯವಾಯಿತು ಎಂದರು.
ಅಧ್ಯತೆ ವಹಿಸಿದ್ದ ಪಿ.ವಿ.ಹಿರೇಮಠ ಮಾತನಾಡಿದರು. ಪ್ರೊ. ದುಷ್ಯಂತ ನಾಡಗೌಡ, ಡಾ. ಗೋಪಾಲ ದಾಬಡೆ, ಡಾ. ಸಂಜೀವ ಕುಲಕರ್ಣಿ, ಶ್ರೀನಿವಾಸ ವಾಡಪ್ಪಿ, ಎಂ.ಜಿ. ಸಿಂದಗಿ, ದಿವಾಕರ ಹೆಗಡೆ, ಎಸ್.ಎಂ. ದೇಶಪಾಂಡೆ, ಎಸ್.ಟಿ.ಸುಬ್ರಾಯ, ಪರಮೇಶ್ವರ ವಿ.ಎಸ್., ಆರ್. ಎಂ. ದೊಡಮನಿ, ಆರ್.ಎಂ. ಹೊಸಮನಿ, ಆನಂದ ಕುಲಕರ್ಣಿ, ಡಾ. ದೀಪಕ ಆಲೂರ, ಇತರರು ಇದ್ದರು.
ನರಸಿಂಹ ಪರಾಂಜಪೆ ಸ್ವಾಗತಿಸಿದರು. ವೆಂಕಟೇಶ ದೇಸಾಯಿ ನಿರೂಪಿಸಿದರು. ಅನಿಲ ಕಾಖಂಡಿಕಿ ವಂದಿಸಿದರು.