

ಲಿಂಗಸುಗೂರು: ಕೇಂದ್ರ ಸರ್ಕಾರ ಅಂಗೀಕರಿಸಿದ ಹೊಸ ಕಾರ್ಮಿಕ ಕಾಯ್ದೆಗಳ ಪೈಕಿ ನಾಲ್ಕು ಲೇಬರ್ ಕೋಡ್‌ಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಟಿಯುಸಿಐ ಸಂಘಟನೆ ಮುಖಂಡರು ಸೋಮವಾರ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಕೇರಳ ಕಾರ್ಮಿಕ ಕಲ್ಯಾಣ ಮಂಡಳಿ ನೆರವು
ದೇಶದ ಸರ್ವಾಂಗ ಸೇವೆ ಸಲ್ಲಿಸುವ ಕಾರ್ಮಿಕರು, ಉದ್ಯೋಗಿಗಳು ಮತ್ತು ಕೆಲಸಗಾರರಿಗೆ ಕನಿಷ್ಠ ಜೀವನ ಭದ್ರತೆ ಒದಗಿಸದೆ ಬಂಡವಾಳಶಾಹಿಗಳ ಸೂಪರ್ ಪ್ರಾಫಿಟ್‌ಗಾಗಿ ಹೊಸ ಕಾರ್ಮಿಕ ಕಾಯ್ದೆ ಅಂಗೀಕರಿಸಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿ ವರ್ಷ ಹೊರಡಿಸುವ ಅಧಿಸೂಚನೆಗಳ ಪ್ರಕಾರ ನಿಗದಿಯಾದ ಕನಿಷ್ಠ ದಿನಗೂಲಿಯಲ್ಲಿ ಶೇ.10 ಕಾರ್ಮಿಕರಿಗೆ ಸಿಗುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಾರ್ಮಿಕ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ.
ಕೇಂದ್ರ ಸರ್ಕಾರ ನಾಲ್ಕು ಲೇಬರ್ ಕೋಡ್‌ಗಳನ್ನು ರದ್ದುಗೊಳಿಸಿ ಕನಿಷ್ಠ ವೇತನ ಜಾರಿಗೆ ತಂದು ಕಾರ್ಮಿಕರಿಗೆ ತಿಂಗಳಿಗೆ 31,500 ವೇತನ ಹೆಚ್ಚಿಸಬೇಕು. ಎಂಟು ಗಂಟೆ ಕೆಲಸ, ರಜಾ ದಿನಗಳು ಮತ್ತು ಸಾಮಾಜಿಕ ಭದ್ರತೆ ಪ್ರಯೋಜನ ಖಚಿತ ಪಡಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಟಿಯುಸಿಐ ರಾಜ್ಯಾಧ್ಯಕ್ಷ ಎಂ.ಡಿ.ಅಮೀರಅಲಿ, ರಾಜ್ಯ ಸಮಿತಿ ಸದಸ್ಯ ತಿಪ್ಪರಾಜ ಗೆಜ್ಜಲಗಟ್ಟಾ, ಜಿಲ್ಲಾ ಸಮಿತಿ ಸದಸ್ಯರಾದ ಆದೇಶ ನಗನೂರು, ಬಸವರಾಜ ಹಿರೇಹೆಸರೂರು, ನಸ್ರೀನ್ ಬೇಗಂ, ಕಮಲಮ್ಮ, ದೇವಮ್ಮ, ಗದ್ದೆಮ್ಮ, ಹುಲಿಗೆಮ್ಮ, ಕಮಲಾಬಾಯಿ, ರೇಣುಕಾ, ಶಾಂತಮ್ಮ, ಆನಂದಮ್ಮ ಇತರರಿದ್ದರು.