ಪೆಟ್ರೋಲ್, ಡೀಸೆಲ್ ಬೆಲೆ ಇಳಿಸದಿದ್ದರೆ ಜಿಲ್ಲೆ ಬಂದ್ ರಸ್ತೆ ತಡೆದು ಪ್ರತಿಭಟಿಸಿ ಶಾಸಕ ಡಾ.ವೈ.ಭರತ್ ಶೆಟ್ಟಿ ಎಚ್ಚರಿಕೆ

mng--20 June kulai protest
Published on

ಮಂಗಳೂರು: ರಾಜ್ಯ ಸರ್ಕಾರ ತೈಲ ಬೆಲೆ ಇಳಿಸದಿದ್ದರೆ ಬಿಜೆಪಿ ಜಿಲ್ಲಾ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.


ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ದ ಕುಳಾಯಿಯಲ್ಲಿ ಗುರುವಾರ ಸಂಜೆ ನಡೆದ ಹೆದ್ದಾರಿ ತಡೆ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು.
ತೈಲ ಬೆಲೆ ಏರಿಕೆಯಿಂದ ತರಕಾರಿ ,ದಿನಸಿ ವಸ್ತುಗಳ ಬೆಲೆ ಏರಿದೆ. ಇದೀಗ ಹೆಚ್ಚು ಮಾಡಿ ಸಾವಿರ ಸಾವಿರ ಕೋಟಿ ಹಣದ ಲೆಕ್ಕವೇ ಇಲ್ಲದಂತಾಗಿದೆ. ಅಭಿವೃದ್ಧಿ ಪಾತಾಳ ಮುಟ್ಟಿದೆ. ಸದನದಲ್ಲಿ ಸುಳ್ಳು ಉತ್ತರ ಕೊಟ್ಟು ಜನರ ಹಾದಿ ತಪ್ಪಿಸುವ ಕೆಲಸವಾಗುತ್ತಿದೆ.


ಕಾನೂನು ಸುವ್ಯವಸ್ಥೆ ಹದೆಗೆಟ್ಟು ನಿತ್ಯ ಕೊಲೆ, ಮಾನಭಂಗ ಪ್ರಕರಣ ನಡಯುತ್ತಿದ್ದು ಜನ ಆತಂಕ ಪಡುವಂತಾಗಿದೆ. ಇಂತಹ ಜನ ವಿರೋಧಿ ಸರ್ಕಾರದ ವಿರುದ್ದ ಶಾಪ ಹಾಕುತ್ತಿದ್ದಾರೆ ಎಂದರು. ವಿವಿಧ ನಿಗಮ ಮಂಡಳಿಗಳಲ್ಲಿ ನೂರಾರು ಕೋಟಿ ಹಗರಣ ಸರಮಾಲೆಯನ್ನೇ ಮಾಡುತ್ತಿರುವ ಈ ಸರ್ಕಾರದ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದರು.


ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಲಾಯಿತು. ಶಾಸಕರ ಸಹಿತ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.
ಡಿಸಿಪಿ ಸಿದ್ದಾರ್ಥ್ ಗೋಯಲ್ ನೇತೃತ್ವದಲ್ಲಿ ಬಿಗಿ ಭದ್ರತೆ ಮಾಡಲಾಗಿತ್ತು. ಬಿಜೆಪಿ ಉತ್ತರ ಮಂಡಲ ಆಧ್ಯಕ್ಷ ರಾಜೇಶ್ ಕೊಟ್ಟಾರಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ಬೊಟ್ಟಾಡಿ, ಯತೀಶ್ ಅರ್ವರ್, ಪೂಜಾ ಪೈ, ವಿಕಾಸ್ ಪುತ್ತೂರು, ಆರ್.ಸಿ ನಾರಾಯಣ, ಸಂದೀಪ್ ಪಚ್ಚನಾಡಿ, ಯುವಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಕಷ್ಣಾಪುರ, ಪಾಲಿಕೆ ಉಪಮೇಯರ್ ಸುನೀತಾ, ಮಹಾ ಶಕ್ತಿಕೇಂದ್ರ ಸುರತ್ಕಲ್ ನಗರ 2ರ ಅಧ್ಯಕ್ಷರಾದ ದಿನಕರ್ ಇಡ್ಯಾ, ಸುನಿಲ್ ಕುಳಾಯಿ, ಜಗದೀಶ್ ಶೇಣವ, ರಣದೀಪ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net