

ಬೆಳಗಾವಿ: ಕ್ಯಾಬೇಜ್ ದರ ಕುಸಿದಿರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮಗಾಗಿರುವ ಹಾನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ರೈತರು ತಾವು ಬೆಳೆದ ಕ್ಯಾಬೇಜ್ ಸಮೇತ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟಿಸಿದರು. ಬಳಿಕ ರಸ್ತೆಯಲ್ಲಿ ಕ್ಯಾಬೇಜ್ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಅಪ್ಪಾಸಾಹೇಬ ದೇಸಾಯಿ ಮಾತನಾಡಿ, 3&4 ತಿಂಗಳಿಂದ ಕ್ಯಾಬೇಜ್, ಮೂಲಂಗಿ ಸೇರಿ ತರಕಾರಿಗಳ ದರ ಕುಸಿದಿದೆ. ತರಕಾರಿಯನ್ನು ಮಾರುಕಟ್ಟೆಗೆ ತಂದರೆ, ವಾಹನದ ಬಾಡಿಗೆಯೂ ಸಿಗುತ್ತಿಲ್ಲ. ಹಾಗಾಗಿ ಬೆಳೆಗಳು ಹೊಲದಲ್ಲೆ ಕೊಳೆಯುತ್ತಿದೆ. ಇದರಿಂದ ರೈತರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಹಾಗಾಗಿ ಎಲ್ಲ ತರಕಾರಿಗೆ ವೈಾನಿಕ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ಎಕರೆಯಲ್ಲಿ ಕ್ಯಾಬೇಜ್ ಬೆಳೆಯಲು 45ರಿಂದ 50 ಸಾವಿರ ರೂ. ರ್ಖಚಾಗುತ್ತದೆ. ಈಗ ಕೆಜಿಗೆ 80 ಪೈಸೆ ದರ ಇರುವುದರಿಂದ ಕೃಷಿಗೆ ಖರ್ಚು ಮಾಡಿದ ಹಣವೂ ಮರಳಿ ಸಿಗುತ್ತಿಲ್ಲ. ಸರ್ಕಾರ ಬೆಳೆ ಪರಿಹಾರ ವಿತರಿಸಿ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು. ರಾಮನಗೌಡ ಪಾಟೀಲ, ಸುಭಾಷ ಥಾಯಗೊಂಡೆ, ಮಾರುತಿ ಕಡೇಮನಿ, ನಾಮದೇವ ದುಡುಮ, ಚಂದ್ರು ರಾಜಾಯಿ, ರಾಜು ಕಾಗಣಿಕರ ಇತರರಿದ್ದರು.