ಕಾಡಾನೆಗಳು ರೈಲಿಗೆ ಸಿಲುಕುವುದನ್ನು ತಪ್ಪಿಸಿ

ಸಕಲೇಶಪುರ ಪಟ್ಟಣದ ರೈಲ್ವೆ ಇಲಾಖೆ ಸಭಾಂಗಣದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ  ಹೇಮಂತ್ ಕುಮಾರ್ ಮಾತನಾಡಿದರು.
ಸಕಲೇಶಪುರ ಪಟ್ಟಣದ ರೈಲ್ವೆ ಇಲಾಖೆ ಸಭಾಂಗಣದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಹೇಮಂತ್ ಕುಮಾರ್ ಮಾತನಾಡಿದರು.
Published on

ಸಕಲೇಶಪುರ: ರೈಲಿಗೆ ಸಿಲುಕಿ ಕಾಡಾನೆಗಳು ಬಲಿಯಾಗುವುದನ್ನು ತಡೆಯಲು ರೈಲ್ವೆ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಸೂಚಿಸಿದರು.

ಪಟ್ಟಣದ ರೈಲ್ವೆ ಇಲಾಖೆ ಸಭಾಂಗಣದಲ್ಲಿ ರೈಲ್ವೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ  ಆಯೋಜಿಸಿದ್ದ ರೈಲ್ವೆ ಇಲಾಖೆಯ ಲೋಕೋ ಪೈಲೆಟ್ ಹಾಗೂ ಸಹಾಯಕ ಲೋಕೋ ಪೈಲೆಟ್‌ಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ತಾಲೂಕಿನ ಬಾಳ್ಳುಪೇಟೆಯಿಂದ ಗಡಿ ಚೌಡೇಶ್ವರಿ ದೇವಸ್ಥಾನವರೆಗಿನ 51 ಕಿ.ಮಿ ವ್ಯಾಪ್ತಿಯಲ್ಲಿ ಐದು ಕಾಡಾನೆಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ. 50 ಕ್ಕೂ ಅಧಿಕ ಕಾಡುಪ್ರಾಣಿಗಳು ಅಸುನೀಗಿವೆ. ಆದ್ದರಿಂದ, ಈ ವಲಯದಲ್ಲಿ ರೈಲಿನ ವೇಗವನ್ನು 30 ಕಿ.ಮಿ ಮಿತಿಗೊಳಿಸಬೇಕು ಎಂದರು.

ಕಾಡಾನೆಗಳು ಸಂಚರಿಸುವ ಪ್ರದೇಶದಲ್ಲಿ ಶೈನಿಂಗ್ ಬೋರ್ಡ್ ಆಳವಡಿಸಬೇಕು. ರೈಲ್ವೆ ಹಳಿ ಸಮೀಪಕ್ಕೆ ಬೆಳೆದಿರುವ ಲಂಟಾನ ತೆರವುಗೊಳಿಸಬೇಕು ಎಂಬ ಸಲಹೆ ನೀಡಿದ್ದು ರೈಲ್ವೆ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದಾರೆ.

ಕಾರ್ಯಗಾರದಲ್ಲಿ ರೈಲ್ವೆ ಇಲಾಖೆಯ ಹಿರಿಯ ಸೆಕ್ಷನ್ ಇಂಜಿನಿಯರ್ ಧರ್ಮೇಂದ್ರಕುಮಾರ್, ಪೌಲಿನ್, ಉಪವಲಯ ಅರಣ್ಯಾಧಿಕಾರಿಗಳಾದ ಮಹದೇವ್, ಮಂಜುನಾಥ್,ಅರ್ಜುನ್, ಮೋಹನ್‌ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net