ಮಾನವ ಕಳ್ಳಸಾಗಣೆ ತಡೆಗಟ್ಟಿ

01 08 2025_BGRV RURAL_PAGE_05
ನೆಲಮಂಗಲದಲ್ಲಿ ಮಾನವ ಕಳ್ಳ ಸಾಗಣೆ ವಿರೋಧಿ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಕೆ.ಬಿ.ಗೀತಾ, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಲ್ಲಾ ಹಿರಿಯ ಸಿವಿಲ್​ ನ್ಯಾಯಾಧೀಶೆ ಶೈಲಾ ಭೀಮಸೇನ ಬಾಗಡಿ, ಜೆಎಂಎಫ್​ಸಿ ನೆಲಮಂಗಲ ಹಿರಿಯ ಸಿವಿಲ್​ ನ್ಯಾಯಾಧೀಶ ಹರೀಶ್​ ಇದ್ದರು.
Published on

ನೆಲಮಂಗಲ : ಮಾನವ ಕಳ್ಳ ಸಾಗಣೆ ವಿರುದ್ಧ ಹೋರಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಇಂತಹ ಚಟುವಟಿಕೆಗಳ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಕೆ.ಬಿ.ಗೀತಾ ತಿಳಿಸಿದರು.

ನಗರದ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂದ ಜಿಲ್ಲಾಡಳಿತ, ಪೊಲೀಸ್​ ಇಲಾಖೆ, ಶಿಕ್ಷಣ ಇಲಾಖೆ, ನಗರಸಭೆ, ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಣೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು. ಅಂಗಾಂಗಗಳ ಮಾರಾಟ, ಲೈಂಗಿಕತೆ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳಿಗೆ ಮಾನವ ಕಳ್ಳಸಾಗಣೆ ನಡೆಯಲಿದ್ದು, ಇದೆಲಕ್ಕೂ ಬ್ರೇಕ್​ ಹಾಕಬೇಕಿದೆ, ಮಾನವ ಕಳ್ಳಸಾಗಣೆ ಮಾಡಿದಲ್ಲಿ ಕಾಯ್ದೆಯಡಿ ಕನಿಷ್ಠ 7 ವರ್ಷದಿಂದ ಜೀವಾವಧಿ ಶಿೆ ಆಗುತ್ತದೆ. ಸುವ್ಯವಸ್ಥಿತ ಕಾನೂನು ಇದ್ದರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್​.ಶಶಿಧರಶೆಟ್ಟಿ ಮಾತನಾಡಿ, ಮಾನವ ಕಳ್ಳ ಸಾಗಣೆಯು ಸಾಮಾಜಿಕ ಪಿಡುಗಾಗಿದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಪಶುವಾಗುತ್ತಿದ್ದಾರೆ. ಅಪರಾಧಿಗಳು ಮಕ್ಕಳನ್ನು ಅಪರಾಧ ಚಟುವಟಿಕೆಗಳಲ್ಲಿ ಹಾಗೂ ಭಿಾಟನೆಯಲ್ಲಿ ತೋಡಗಿಸುತ್ತಿದ್ದಾರೆ. ಇಂತಹ ಹೀನ ಕೃತ್ಯ ತಪ್ಪಿಸುವುದು ನಾಗರಿಕ ಸಮಾಜದ ಜವಾಬ್ದಾರಿ ಎಂದರು. ಅಪರ ಹಿರಿಯ ಸಿವಿಲ್​ ನ್ಯಾಯಾಧೀಶರಾದ ಟಿ.ಎಲ್​.ಸಂದೇಶ್​, ಕಿಶೋರ್​ಕುಮಾರ್​, ಪ್ರಧಾನ ಸಿವಿಲ್​ ನ್ಯಾಯಾಧೀಶೆ ಪೂಜಾಶೆಟ್ಟಿ, ಅಪರ ಸಿವಿಲ್​ ನ್ಯಾಯಾಧೀಶರಾದ ಮಂಜು, ಎನ್​.ಚಾಂದಿನಿ, ನಗರ ಠಾಣೆ ಆರಕ್ಷಕ ನಿರೀಕ್ಷಕ ಭರತ್​ಗೌಡ, ಬಿಇಒ ರಮೇಶ್​, ವಕೀಲರ ಸಂದ ಅಧ್ಯಕ್ಷ ಕೇಶವಮೂರ್ತಿ, ಉಪಾಧ್ಯಕ್ಷ ಮೋಹನ್​ಕುಮಾರ್​, ಕಾರ್ಯದರ್ಶಿ ನಾಗೇಂದ್ರ, ವಕೀಲ ರುನಾಥ್​, ಮನುಗೌಡ, ರಾಮೇಗೌಡ ಇದ್ದರು.

ಮಕ್ಕಳು ದೇಶದ ಆಸ್ತಿ : ಮಕ್ಕಳು ದೇಶದ ಆಸ್ತಿ. ಆದ್ದರಿಂದ ಅವರು ದುಶ್ಚಟಗಳಿಂದ ದೂರ ಉಳಿದು ಆರೋಗ್ಯವಂತ ಸಮಾಜ ನಿರ್ಮಿಸಬೇಕು. ಸಾರ್ವಜನಿಕರು ಸಮಾಜದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆಗಳನ್ನು ಪೊಲೀಸರ ಗಮನಕ್ಕೆ ತಂದು ಅಪರಾಧ ಚಟುವಟಿಕೆ ತಡೆಯಲು ಸಹಕರಿಸಬೇಕು ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್​.ಶಶಿಧರಶೆಟ್ಟಿ ತಿಳಿಸಿದರು.

ಜಾಗೃತಿ ಜಾಥಾ : ವೇದಿಕೆ ಕಾರ್ಯಕ್ರಮಕ್ಕೂ ನಗರದ ಪ್ರವಾಸಿ ಮಂದಿರದಿಂದ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪದವರೆಗೂ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಶ್ವ ಮಾನವ ಕಳ್ಳ ಸಾಗಾಣಿಕೆ ವಿರೋಧಿ ಕುರಿತು ಜಾಗೃತಿ ಜಾಥಾ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net