ಹಿರಿಯರ ಮೇಲಿನ ದೌರ್ಜನ್ಯ ತಡೆಗಟ್ಟಲಿ

17 RON 3
Published on

ರೋಣ: ರಾಜ್ಯಾದ್ಯಂತ ಹಿರಿಯ ನಾಗರಿಕರ ಮೆಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಿಸಬೇಕು ಎಂದು ಪಟ್ಟಣದ ಹಿರಿಯ ನಾಗರಿಕರು ಆಗ್ರಹಿಸಿದರು.

ಸೋಮವಾರ ರೋಣ ತಾಲೂಕು ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ನಾಗರಾಜ ಕೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಪ್ರತಿ ವರ್ಷ ಜೂ. 15ರಂದು ಹಿರಿಯ ನಾಗರಿಕರ ದೌರ್ಜನ್ಯ ತಡೆ ದಿನವನ್ನಾಗಿ ಘೋಷಿಸಿ ನಾಗರಿಕ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ವಿಚಾರ ಕೇವಲ ದಾಖಲೆಗಳಲ್ಲಿ ಅಡಕವಾಗಿದೆ. ಸರ್ಕಾರ ಮತ್ತು ಅಧಿಕಾರಿಗಳು ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಹಿರಿಯ ನಾಗರಿಕರಲ್ಲಿ ಭದ್ರತೆ ಮೂಡಿಸಬೇಕು ಎಂದು ಮನವಿ ಮೂಲಕ ತಿಳಿಸಿದ್ದಾರೆ.

ಸಂಘದ ಅಧ್ಯಕ್ಷ ಎ.ಎಸ್. ಖತೀಬ, ಎಸ್.ಎಫ್. ಹಂಚಿನಾಳ, ಬಿ.ಎಚ್. ನಾಯಕ, ಕೆ.ಎಸ್. ಬಾರಕೇರ, ಬಿ.ಪಿ. ಅತ್ತಿಗೇರಿ, ಎಂ.ಎಸ್. ಹಾದಿಮನಿ, ಎಸ್.ಪಿ. ರಾಟಿಮನಿ, ಎಸ್.ಪಿ. ಹುನಗುಂಡಿ, ನಿವೃತ್ತ ನೌಕರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net