ಆಡಂಬರ, ದುಂದು ವೆಚ್ಚ ಸಲ್ಲದು

CLK GANESHA 1
Published on

ಚಳ್ಳಕೆರೆ: ಆಡಂಬರ ಮತ್ತು ದುಂದು ವೆಚ್ಚದಲ್ಲಿ ಗಣೇಶನ ಆಚರಣೆ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ವಿಷಾದ ವ್ಯಕ್ತಪಡಿಸಿದರು.

ಗಾಂಧಿನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಗಣಪತಿ ವಿಸರ್ಜನಾ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆಚರಣೆಗಳಲ್ಲಿ ಬಹುಮುಖ್ಯವಾಗಿ ವಿಚಾರ ವಿನಿಮಯ, ಮೌಲ್ಯಾಧಾರಿತ ಸಂದೇಶಗಳು ಸಮಾಜಕ್ಕೆ ತಲುಪಬೇಕು. ಉತ್ಸವಗಳು ಸಮಾಜವನ್ನು ಜಾಗೃತಿಗೊಳಿಸುವ ಆಧಾರವಾಗಬೇಕು ಎಂದು ಹೇಳಿದರು.

ಗಣಪತಿ ಪೂಜಾ ಕಾರ್ಯಕ್ಕೆ ಇರಿಸಲಾಗಿದ್ದ ಸಿಹಿ ಪದಾರ್ಥ ಮತ್ತು ಹೂವಿನ ಹಾರಗಳ ಹರಾಜಿನಲ್ಲಿ ಬೆಂಗಳೂರಿನ ವಸಂತಕುಮಾರ್-ಲಾಡು-36 ಸಾವಿರ ರೂ., ಗುತ್ತಿಗೆದಾರ ಸುನಿಲ್-ಹೂವಿನ ಹಾರ- 43, ಬಿ.ಸಿ.ಮಾರುತಿ-2ನೇ ಹೂವಿನ ಹಾರ-33, ಬಾಲಾಜಿ ಇಂಡಸ್ಟ್ರೀ ಹಳೇಟೌನ್ ಮುರಳಿ-3ನೇ ಹೂವಿನ ಹಾರ-32, ಎಪಿಎಂಸಿ ಧರ್ಮೇಂದ್ರ-4ನೇ ಹೂವಿನ ಹಾರ-30, ಬಾಲಾಜಿ ಟ್ರೇಡರ್ಸ್‌ನ ತಿರುಮಲ್ಲೇಶ್-5ನೇ ಹೂವಿನ ಹಾರವನ್ನು ಹರಾಜಿನಲ್ಲಿ 30 ಸಾವಿರ ರೂಪಾಯಿಗೆ ಪಡೆದುಕೊಂಡರು.

ಗಣಪತಿ ವಿಸರ್ಜನಾ ಮೆರವಣಿಗೆ ನಗರದ ಪ್ರವಾಸಿ ಮಂದಿರದ ಮಾರ್ಗವಾಗಿ ವಾಲ್ಮೀಕಿ, ಅಂಬೇಡ್ಕರ್, ನೆಹರು ವೃತ್ತದಲ್ಲಿ ಮಹಿಳಾ ಕೋಲಾಟ ಮತ್ತು ವಿವಿಧ ಕಲಾತಂಡಗಳೊಂದಿಗೆ ಸಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net