ಶಿವಧ್ಯಾನದಿಂದ ಒತ್ತಡ ದೂರ

Pressure away from Shivadhyana
ಹುನಗುಂದ ಪಟ್ಟಣದ ಬಸವ ಮಂಟಪದಲ್ಲಿ ಸಾಮೂಹಿಕ ಲಿಂಗ ಪೂಜೆ ನೆರವೇರಿಸಲಾಯಿತು. ಇಳಕಲ್ಲನ ಗುರು ಮಹಾಂತೇಶ ಸ್ವಾಮೀಜಿ, ಶಿರೂರಿನ ಬಸವಲಿಂಗ ಸ್ವಾಮಿಗಳು ಇದ್ದರು.
Published on

ಹುನಗುಂದ: ಒತ್ತಡ ಮತ್ತು ಕೆಲವು ವ್ಯಕ್ತಿಗಳು ಬಿಂಬಿಸುವ ಮೂಢನಂಬಿಕೆಗಳಿಂದ ನೆಮ್ಮದಿ ಹಾಳಾಗುತ್ತದೆ ಎಂದು ಚಿತ್ತರಗಿ ಸಂಸ್ಥಾನಮಠ ಹುನಗುಂದದ ಗುರುಮಹಾಂತ ಶ್ರೀಗಳು ಹೇಳಿದರು.

ಪಟ್ಟಣದ ಬಸವ ಮಂಟಪದಲ್ಲಿ ವಿಜಯ ಮಹಾಂತೇಶ ತರುಣ ಸಂಘ ಮತ್ತು ಅಕ್ಕನ ಬಳಗ ಮತ್ತು ಮಠದ ಬಸವ ಶರಣರು ಶಿವರಾತ್ರಿ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ಲಿಂಗಪೂಜೆ ಮತ್ತು ಸಾಮೂಹಿಕ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಲಿಂಗ ಪೂಜೆ ವಿಧಾನಗಳನ್ನು ತಿಳಿಸಿ ಮಾತನಾಡಿದ ಅವರು, ಶರಣ ತತ್ವಗಳನ್ನು ಅಳವಡಿಸಿಕೊಂಡು ನೆಮ್ಮದಿ ಬದುಕನ್ನು ಸಾಗಿಸಬೇಕು ಎಂದರು.

ಶಿರೂರಿನ ಮಹಾಂತ ತೀರ್ಥದ ಡಾ.ಬಸವಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿ, ಸಾಂಸ್ಕೃತಿಕ ನಾಯಕ ಬಸವಣ್ಣ ನೀಡಿದ ಲಿಂಗ ಪೂಜೆಯಲ್ಲಿ ದೇವರಿದ್ದಾನೆ ಎಂದರು.

ಬೆಳಗ್ಗೆ ಆಯೋಜಿಸಿದ್ದ ಸಾಮೂಹಿಕ ಲಿಂಗ ಪೂಜೆಯಲ್ಲಿ ನಗರದ ಸಂಗಣ್ಣ ದೇವಶಟ್ಟಿ, ಚಂದ್ರಶೇಖರ ಹವಾಲ್ದಾರ, ಶಿವಬಸವ ಅಂಗಡಿ, ಮಲ್ಲು ಜಾಲಿಹಾಳ, ಘಜಪ್ಪ ದೇವಶಟ್ಟಿ, ಮಹಾಂತೇಶ ಅವಾರಿ, ಶಿಕ್ಷಕಿ ಗೀತಾ ತಾರಿವಾಳ, ಗಂಗಮ್ಮ ಹೊಸೂರ, ಶಿವಪ್ಪ ನಾಗೂರ, ಕಿಡಿಯಪ್ಪ ಹೋಲಗೇರಿ, ಮಹಾಂತಪ್ಪ ಪಲ್ಲೇದ ಪಾಲ್ಗೊಂಡಿದ್ದರು.

ಸಾಮೂಹಿಕ ಮಹಾಪ್ರಸಾದ ನಡೆಯಿತು. ವೀರೇಶ ಕುರ್ತಕೋಟಿ, ಮಹಾಂತೇಶ ಪಾಪನಾಳ, ಶ್ರೀಶೈಲ ಹಂಡಿ, ಈರಪ್ಪ ಮೇಳಿ, ಪರಸಪ್ಪ ಪಲ್ಲೇದ, ಮಲ್ಲಪ್ಪ ಪಲ್ಲೇದ, ಶಿವಪ್ಪ ಬಾದವಾಡಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net