ಇಂದಿನಿಂದ ಸರ್ವಧರ್ಮ ಸದ್ಭಾವನಾ ಸಮಾರಂಭ

KLR 6-4
Published on

ಕೊಲ್ಹಾರ: ಶತಮಾನದ ಸೂಫಿ ಸಂತ ಶ್ರೀ ಗುರು ಅಲ್‌ಹಾಜ್ ಶಾಹ ಮೊಹ್ಮದ ಅಬ್ದುಲ್‌ಗಫಾರಿಯಾ ಖಾದ್ರಿ 27ನೇ ಉರುಸ್ ನಿಮಿತ್ತ 20ನೇ ಸರ್ವಧರ್ಮ ಸದ್ಭಾವನ ಸಮಾರಂಭವು ಮಾ.7, 8 ರಂದು ನಡೆಯಲಿದೆ ಎಂದು ಖಾನಕಾಯೇ ಗಾರಿಯಾ ಗುರುಕುಲದ ಪೀಠಾಧಿಪತಿ ಅಲ್‌ಹಾಜ್ ಬಕ್ತೀಯಾರ್ ಖಾನ್ ಪಠಾಣ ತಿಳಿಸಿದರು.
ಖಾದ್ರಿಯವರ ಉರುಸು ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜಕೀಯ, ಧಾರ್ಮಿಕ ಮುಖಂಡರು ಭಾಗವಹಿಸುವರು. ಮಾ.7ರಂದು ಉರ್ದು ಅಕಾಡೆಮಿ ಹಾಗೂ ಗಫಾರಿಯಾ ಗುರುಕುಲದ ಸಹಯೋಗದಲ್ಲಿ ರಾತ್ರಿ 8.30 ಗಂಟೆಗೆ ಪಟ್ಟಣದ ಆಜಾದ್ ನಗರದಲ್ಲಿ ಕವ್ವಾಲಿ ಕಾರ್ಯಕ್ರಮ ನಡೆಯುವುದು. ಮಾ. 8 ರಂದು ಖಾನ್‌ಕಾಯೇ ಗಾರಿಯಾ ಗುರುಕುಲದ ಆವರಣದಲ್ಲಿ ಅಲ್ ಅಮೀನ್ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಖಾನಕಾಯೇ ಗಾರಿಯಾ ಹಾಗೂ ಲಬ್ರೈಕ್ ವೆಲ್‌ಫೇರ್ ಟ್ರಸ್ಟ್ ನೇತೃತ್ವದಲ್ಲಿ ಆರೋಗ್ಯ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ. ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕುರಾನ್ ಪಠಣ, ನಾತ ಹಾಗೂ ಹಮ್ದ್ ಪಠಣ ಹಾಗೂ ನಾಡೋಜ ಡಾ. ಮಹೇಶ ಜೋಶಿಯವರಿಗೆ 16ನೇ ಅಲಹಾಬಾದ್ ಮೌಲಾನಾ ಭಾವೈಕ್ಯತಾ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಉಸ್ಮಾನ್ ಪಟೇಲ್ ಖಾನ್, ಇಕ್ಬಾಲ್ ಮುಜಾವರ, ಹನೀಫ್ ಮಕಾನದಾರ, ಹಾಜಿಮಲಂಗ್ ಜಮಾದಾರ, ಅಯ್ಯಬಖಾನ್ ಪಠಾಣ, ಶರೀಫ್ ಪಠಾಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net