೨ರಂದು ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘ ಶಾಖೆ ಉದ್ಘಾಟನೆ

Published on

ಪುತ್ತೂರು: ದಕ್ಷಿಣ ಕನ್ನಡ ಉಡುಪಿ, ಕೊಡಗು, ಮೈಸೂರು ಜಿಲ್ಲೆಗಳ ಕಾರ್ಯವ್ಯಾಪ್ತಿ ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ೧೭ನೇ ಶಾಖೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಕೆ.ಸಿ.ರೋಡು ನಲ್ಲಿ ಅ.೨ರಂದು ಉದ್ಘಾಟನೆ ಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ಹೇಳಿದರು.

ಬೆಳಗ್ಗೆ ೧೦.೩೦ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಶಶಿ ಕುಮಾರ್ ರೈ ಬಾಲ್ಯೊಟ್ಟು ಶಾಖೆ ಉದ್ಘಾಟಿಸಲಿದ್ದು, ಭದ್ರತಾ ಕೋಣೆಯನ್ನು ಗೋಳ್ತಮಜಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಉದ್ಘಾಟಿಸುವರು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ವಕೀಲ ಕುಶಾಲಪ್ಪ ಕುಲಾಲ್, ಗೋಳ್ತಮಜಲು ಗ್ರಾಪಂ ಸದಸ್ಯ ಕೆ. ಮಹಮ್ಮದ್ ಮುಸ್ತಾಫಾ, ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಽಕಾರಿ ಕರುಣಾಕರ ವಿ., ದ.ಕ ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರ ಸಂಘ ನಿರ್ದೇಶಕ ನಾರಾಯಣ ಸಿ ಪೆರ್ನೆ, ಈಶಾನ ಕಾಂಪ್ಲೆಕ್ಸ್ ಕಟ್ಟಡ ಮಾಲಕ ಗೋಪಾಲ ಕುಲಾಲ್ ಭಾಗವಹಿಸಲಿರುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯ ಕಾರ್ಯನಿರ್ವಹಣಾಽಕಾರಿ ಎಸ್. ಜನಾರ್ದನ ಮೂಲ್ಯ, ಸಂಘದ ನಿರ್ದೇಶಕ ಗಣೇಶ್ ಪಿ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net