ತಿ.ನರಸೀಪುರ ಇನ್‌ಸ್ಪೆಕ್ಟರ್ ವಿರುದ್ಧ ಹೇಳಿಕೆ ಖಂಡನೆ

1000448425
Published on

ಮೂಗೂರು: ತಿ.ನರಸೀಪುರ ಟೌನ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಧನಂಜಯ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಜಗದೀಶ್ ವಿರುದ್ಧ ಕೆಲವರು ಇಲ್ಲಸಲ್ಲದ್ದ ಆರೋಪ ಮಾಡುತ್ತಿರುವುದನ್ನು ದಲಿತ ಮುಖಂಡ ಮುಖಂಡ ಎಂ.ಎಂ.ಜಗದೀಶ್ ಖಂಡಿಸಿದರು.

ನಿಷ್ಠಾವಂತ ಇನ್‌ಸ್ಪೆಕ್ಟರ್ ಧನಂಜಯ್ ಅವರು ತಾಲೂಕಿನಲ್ಲಿ ಅಧಿಕಾರ ವಹಿಸಿಕೊಂಡ ಮೇಲೆ ಕಾನೂನು ಸುವ್ಯಸ್ಥೆಗೆ ಮೊದಲ ಆದ್ಯತೆ ನೀಡಿದ್ದು, ಸಾಕಷ್ಟು ಸುಧಾರಣೆ ಮಾಡಿದ್ದಾರೆ. ಜತೆಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳು ಅಕ್ರಮಿಸಿಕೊಂಡಿದ್ದನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇಡೀ ತಾಲೂಕನ್ನು ಮಾದರಿಯನ್ನಾಗಿಸಿದ್ದಾರೆ. ಆದರೆ ಇದನ್ನು ಸಹಿಸದ ಕೆಲವು ಸಂಘಟನೆ ಮುಖಂಡರು, ವೈಯಕ್ತಿಕ ವಿಚಾರಕ್ಕೆ ನಿಷ್ಠಾವಂತ ಅಧಿಕಾರಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ದೂರಿದರು.

ಮುಖಂಡ ಕೃಷ್ಣಸ್ವಾಮಿ ಮಾತನಾಡಿ, ಠಾಣೆಯಲ್ಲಿ ದಲ್ಲಾಳಿಗಳಿಗೆ ಅವಕಾಶ ನೀಡದಿರುವುದನ್ನು ಸಹಿಸದ ಕೆಲವರು, ಇವರ ವಿರುದ್ಧ ಹುನ್ನಾರ ನಡೆಸುತ್ತಿದ್ದಾರೆ. ದಕ್ಷ ಪೊಲೀಸ್ ಅಧಿಕಾರಿಯ ಹೆಸರಿಗೆ ಮಸಿ ಬಳಿಯುವ ಕುತಂತ್ರ ನಡೆಯುತ್ತಿದೆ. ಇವರ ತೇಜೋವಧೆ ಮಾಡುವುದನ್ನು ಕೈ ಬಿಡಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಎಂ.ಬಿ.ಕೃಷ್ಣಸ್ವಾಮಿ, ಗ್ರಾಪಂ ಸದಸ್ಯರಾದ ಪುಟ್ಟ ಮಾದಯ್ಯ, ಮಹೇಶ್, ಹಾಗೂ ಚಿಕ್ಕ ಮಾಧು, ಸುಧೀರ್, ವಿಕಾಶ್, ಮಹದೇವ್, ಮಾಜಿ ಸದಸ್ಯ ರಾಜಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net