ಗೋಕಳ್ಳರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ - ಹಿಂಜಾವೇ ಸಂಯೋಜಕ ನರಸಿಂಹ ಮಾಣಿ ಆಗ್ರಹ

Published on

ಪುತ್ತೂರು: ರಾಜಾರೋಷವಾಗಿ ಮನೆಯಿಂದ ಗೋವನ್ನು ಕದ್ದು, ಗೋಮಾಲೀಕರ ತೋಟದಲ್ಲೇ ಮಾಂಸ ಮಾಡುವ ಪ್ರವೃತ್ತಿಯನ್ನು ಕಠಿಣ ಪದಗಳಲ್ಲಿ ಖಂಡಿಸುತ್ತೇವೆ. ಶಾಂತಿ ಕಾಪಾಡುವ ವ್ಯವಸ್ಥೆಯಿಂದ ಅಂಶಾಂತಿಗೆ ಕಾರಣವಾಗುತ್ತಿದೆ. ಗೋಕಳ್ಳರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಮತ್ತು ಆರೋಪಿಗಳಿಗೆ ಜಾಮೀನು ಸಿಗದ ರೀತಿ ಇಲಾಖೆ ನೋಡಿಕೊಳ್ಳಬೇಕು ಎಂದು ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಮಂಡಲ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಆಗ್ರಹಿಸಿದ್ದಾರೆ.

ಕೆದಿಲ, ಸರೋಳಿ, ಶಕ್ತಿಕಲ್ಲು ಭಾಗದಲ್ಲಿ ಹಲವು ವರ್ಷಗಳಿಂದ ಗೋಕಳ್ಳತನ ಮತ್ತು ಸಾಗಾಟ ನಡೆಯುತ್ತಿದ್ದು, ಇಲಾಖೆ ಈ ಬಗ್ಗೆ ಯಾಕೆ ಯಾವುದೇ ಕ್ರಮಕೈಗೊಂಡಿಲ್ಲ? ಸಮಾಜದ ಸ್ವಾಸ್ಥ್ಯ ಕದಡುವ ಕಾರ್ಯಕ್ಕೆ ಅಗತ್ಯ ಕ್ರಮ ಯಾಕಿಲ್ಲ? ದಕ್ಷ ಅಽಕಾರಿಗಳನ್ನು ನೇಮಿಸಿ, ಎಲ್ಲವನ್ನೂ ನಿಯಂತ್ರಣ ಮಾಡುವುದಕ್ಕೆ ಮುಂದಾದವರು ಈಗ ಎಲ್ಲಿ? ಕಮ್ಯೂನಲ್ ವಿಂಗ್ ಹಿಂದುಗಳನ್ನು ಮಾತ್ರ ಹೆದುರಿಸುವುದಕ್ಕೆ ಇರುವುದಾ? ಇಲಾಖೆ ಅಕ್ರಮ ಗೋ ಸಾಗಾಟ ಮಾಡುವವರ ಎಷ್ಟು ಮನೆಗೆ ತೆರಳಿ -ಟೋ ತೆಗೆಯುವ ಕಾರ್ಯ ಮಾಡಿದೆ? ಯಾರದೋ ಮನೆಯಿಂದ ಗೋವುಗಳನ್ನು ಕದ್ದು ಹಬ್ಬ ಆಚರಣೆ ಮಾಡುವ ಅಗತ್ಯವಿದೆಯಾ? ಬಂಟ್ವಾಳ ತಾಲೂಕಿನಲ್ಲಿ ನಡೆಯುತ್ತಿರುವ ಎರಡನೇ ಪ್ರಕರಣ ಇದಾಗಿದ್ದು, ೨೪ ಗಂಟೆ ಒಳಗೆ ಕೃತ್ಯ ಎಸಗಿದವರನ್ನು ಬಂಽಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪುತ್ತೂರು ಜಿಲ್ಲಾ ಸಂಯೋಜಕ ಮೋಹನದಾಸ ಕಾಣಿಯೂರು, ಸಹ ಸಹೋಜಕ ದಿನೇಶ್ ಪಂಜಿಗ, ತಾಲೂಕು ಸಂಯೋಜಕ ಕೀರ್ತನ್ ಸವಣೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net