ಸುಳ್ಳುಗಳೇ ಬಿಜೆಪಿ ಬಂಡವಾಳ - ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಆರೋಪ

Published on

ಪುತ್ತೂರು: ಜನಾರ್ದನ ಪೂಜಾರಿ ಅವರದು ನಾರಾಯಣಗುರುಗಳ ಸಿದ್ಧಾಂತವಾಗಬೇಕಿತ್ತು. ಸಾವರ್ಕರ್ ಸಿದ್ಧಾಂತವಲ್ಲ ಎಂದು ಪ್ರಶ್ನೆ ಮಾಡಿದ ವಿಚಾರವನ್ನು ನಾರಾಯಣಗುರುಗಳಿಗೆ ಅವಮಾನ ಮಾಡಿದ್ದಾರೆಂದು ಬಿಜೆಪಿಯವರು ಬಿಂಬಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಆರೋಪಿಸಿದರು.

ನಾರಾಯಣಗುರುಗಳ ಸಿದ್ಧಾಂತವಾ ಎಂದು ಕೇಳಿದ ತಕ್ಷಣ ಅವರಿಗೆ ಅವಮಾನ ಹೇಗಾಗುತ್ತದೆ. ಸುಳ್ಳುಗಳೇ ಬಿಜೆಪಿಯವರ ಬಂಡವಾಳವಾಗಿದೆ. ವಿಚಾರವನ್ನು ತಿರುಚಿ ಹೇಳಿಕೊಂಡು ರಾಜಕಾರಣ ಮಾಡುವುದು ಜಾಯಮಾನ. ಜವಾಬ್ದಾರಿಯುತ ಶಾಸಕರು ತಿರುಚಿ ಆರೋಪ ಮಾಡುವ ಮೂಲಕ ಸಮುದಾಯವನ್ನು ಎತ್ತಿಕಟ್ಟುವುದಕ್ಕೆ ಮುಂದಾಗಿದ್ದಾರೆ. ಬಿಜೆಪಿಯವರು ನಾರಾಯಣಗುರುಗಳು ಸಿದ್ಧಾಂತವನ್ನು, ಆದರ್ಶವನ್ನು ಒಪ್ಪುತ್ತಾರೆಯೆ? ಇತಿಹಾಸ ಕೆದಕಿದರೆ, ಇದೇ ಬಿಜೆಪಿ ನಾಯಕರು ಮತ್ತು ಪಕ್ಷ ನಾರಾಯಣಗುರುಗಳಿಗೆ ಅವಮಾನ ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಹಿರಿಯರಾದ ಮೌರೀಸ್ ಮಸ್ಕರೇನಸ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಪಾಯಸ್, ಉಪಾಧ್ಯಕ್ಷ ಸುರೇಶ್ ಪೂಜಾರಿ ಮೊಟ್ಟೆತ್ತಡ್ಕ, ಎನ್.ಎಸ್.ವೈ. ರಾಜ್ಯ ಪ್ರಧಾನ ಕಾರ್ಯದರ್ಶಿ ಬಾತಿಶಾ ಅಳಕೆಮಜಲು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net