ಗುರುಗಳ ಸಿದ್ಧಾಂತದೊಂದಿಗೆ ಅವಿನಾಭಾವ ಸಂಬಂಧ - ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ ಹೇಳಿಕೆ

Published on

ಪುತ್ತೂರು: ನಾರಾಯಣಗುರುಗಳ ಸಿದ್ಧಾಂತಗಳಿಗೆ ಹಾಗೂ ಬಿಜೆಪಿಗೆ ಅವಿನಾಭಾವ ಸಂಬಂಧವಿದ್ದು, ಗುರುಗಳು ಎಲ್ಲರನ್ನೂ ಸಮನಾಗಿ ಕಂಡಿದ್ದಾರೆ. ಮಹಮ್ಮದ್ ಆಲಿಗೆ ಲಘುವಾಗಿ ಮಾತನಾಡಲು ಹಕ್ಕಿಲ್ಲ ಎಂದು ಒ.ಬಿ.ಸಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ ಹೇಳಿದರು.

ವ್ಯಕ್ತಿಗತ ರಾಜಕಾರಣ ಮಾಡುವುದಿಲ್ಲ. ಸಂಸ್ಕಾರವಿಲ್ಲದ ನಾಲಿಗೆ ಏನುಬೇಕಾದರೂ ಮಾತನಾಡಬಾರದು. ಮೇರು ಗುರುಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ಪಕ್ಷ ಸಹಿಸುವುದಿಲ್ಲ. ಬುರುಡೆ ಗ್ಯಾಂಗಾ? ಸಮೀರ್ ಗ್ಯಾಂಗಾ? ಹಿಂದೆ ಷಡ್ಯಂತ್ರವಿದೆಯಾ? ಪುತ್ತೂರಿನಲ್ಲೂ ಷಡ್ಯಂತ್ರದ ಭಾಗವಿದೆಯಾ? ಎಂದು ಬಿಜೆಪಿಗೆ ಅನುಮಾನವಿದೆ. ಎಲ್ಲ ಧರ್ಮಕ್ಕೆ ಸಲ್ಲುವ ನಾರಾಯಣಗುರುಗಳ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು. ವಿವಾದಕ್ಕೆ ನಾರಾಯಣಗುರುಗಳನ್ನು ಎಳೆದು ತರುವ ಅಗತ್ಯವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಬಡಾವು, ಪುರುಷೋತ್ತಮ, ನಿರಂಜನ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net