ವಿಷಯ ಕದ್ದು ಪ್ರಸ್ತಾಪ ನಾಚಿಕೆಗೇಡಿನ ಸಂಗತಿ - ಪುತ್ತೂರು ಬ್ಲಾಕ್ ಕಾಂಗ್ರೆಸ್ ವಕ್ತಾರ ನಿಹಾಲ್ ಪಿ.ಶೆಟ್ಟಿ ಲೇವಡಿ

Published on

ಪುತ್ತೂರು: ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ಕೆಂಪು ಕಲ್ಲು ವ್ಯವಹಾರದಲ್ಲಿ ಸಮಸ್ಯೆ ಉಂಟಾಗಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರ ಗಮನ ಸೆಳೆದಿದ್ದರು. ಇದಾದ ಬಳಿಕ ಇದೇ ವಿಚಾರದಲ್ಲಿ ಸದನದಲ್ಲಿದ್ದ ಬಿಜೆಪಿ ಶಾಸಕರು ಮಾತನಾಡಿದ್ದಾರೆ. ಅಶೋಕ್ ಕುಮಾರ್ ರೈ ವಿಷಯವನ್ನು ಕದ್ದು, ಮಾತನಾಡಿರುವುದು ನಾಚಿಕೆಗೇಡಿನ ವಿಚಾರ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ವಕ್ತಾರ ನಿಹಾಲ್ ಪಿ.ಶೆಟ್ಟಿ ಆರೋಪಿಸಿದರು.

ಉಡುಪಿ, ದ.ಕ. ಜಿಲ್ಲೆಯ ಶಾಸಕರಿಗೆ ಮಾತನಾಡಲು ಸಾಕಷ್ಟು ಅವಕಾಶ ಇತ್ತಾದರೂ, ಕೆಂಪು ಕಲ್ಲು ಸಮಸ್ಯೆಯ ಬಗ್ಗೆ ತುಟಿ ಬಿಚ್ಚಲಿಲ್ಲ. ಅಶೋಕ್ ರೈ ಅವರಿಗೆ ಸದನದಲ್ಲಿ ಮಾತನಾಡಲು ಸಂಜೆ ವೇಳೆ ಅವಕಾಶ ಸಿಕ್ಕಿದೆ. ಆ ವೇಳೆ ಕೆಂಪು ಕಲ್ಲಿನ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದರು. ಆ ಬಳಿಕ ಬಿಜೆಪಿ ಶಾಸಕರು ಇದರ ಮೈಲೇಜ್ ಪಡೆದುಕೊಂಡು ನಾವೂ ಮಾತನಾಡಿದ್ದೇವೆ ಎಂದು ಜನರಿಗೆ ತೋರ್ಪಡಿಸುವ ಉದ್ದೇಶದಿಂದ ಮಾತನಾಡಿದ್ದಾರೆ. ಜನ ತುಂಬ ಬುದ್ಧಿವಂತರಾಗಿದ್ದು, ಯಾರು ಜನರ ಸಮಸ್ಯೆ ಬಗ್ಗೆ ಅರಿತು ಮಾತನಾಡುತ್ತಾರೆ ಎಂಬುದು ಚೆನ್ನಾಗಿ ಗೊತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net