೧ರಿಂದ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹ

Published on

ಪುತ್ತೂರು: ಬಹುವಚನಂ ಪುತ್ತೂರು, ದಿ.ಜಿ.ಎಲ್.ಆಚಾರ್ಯ ಜನ್ಮಶತಾಬ್ದಿ ಸಮಿತಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಪುತ್ತೂರು, ಸ್ವಾಮಿ ಕಲಾಮಂದಿರ ಆಶ್ರಯದಲ್ಲಿ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹ ಜೂನ್ ೧ರಿಂದ ೭ವರೆಗೆ ಸಂಜೆ ೬ರಿಂದ ೮ರ ತನಕ ಬೈಪಾಸ್ ರಸ್ತೆಯ ದರ್ಶನ ಕಲಾಮಂದಿರದಲ್ಲಿ ನಡೆಯಲಿದೆ ಎಂದು ದಿ.ಜಿ.ಎಲ್.ಆಚಾರ್ಯ ಜನ್ಮಶತಾಬ್ದಿ ಸಮಿತಿಯ ಬಲರಾಮ ಆಚಾರ್ಯ ಹೇಳಿದರು.

ಶ್ರೀ ವೇದವ್ಯಾಸ ವಿರಚಿತ ಪುರಾಣರಾಜ ಶ್ರೀ ಮದ್ಭಾಗವತ ಪ್ರವಚನವನ್ನು ವಾಗ್ಮಿ ವೀಣಾ ಬನ್ನಂಜೆ ನಡೆಸಲಿದ್ದಾರೆ. ಸನಾತನ ಧರ್ಮದ ಅರಿವು ನೀಡುವ ನಿಟ್ಟಿನಲ್ಲಿ ಪ್ರವಚನ ಏರ್ಪಡಿಸಲಾಗಿದ್ದು, ೬೦೦ಕ್ಕೂ ಅಽಕ ಮಂದಿ ಭಾಗವಹಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಸ್ವಾಮಿ ಕಲಾ ಮಂದಿರದ ಮಾಧವ ಸ್ವಾಮಿ, ಬಹುವಚನಂ ಸಂಸ್ಥೆಯ ಡಾ.ಶ್ರೀಶ ಕುಮಾರ್ ಎಂ. ಕೆ. ಉಪಸ್ಥಿತರಿದ್ದರು.

ಕಾರ್ಯಕ್ರಮ ವಿವರ

ಜೂನ್ ೧ರಂದು ಸಾಯಂಕಾಲ ೫.೩೦ಕ್ಕೆ ನಿವೃತ್ತ ಸರ್ಕಾರಿ ವೈದ್ಯ ಡಾ.ರಘು ಉದ್ಘಾಟಿಸುವರು. ಜಿ.ಎಲ್. ಸಮೂಹ ಸಂಸ್ಥೆಯ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸ್ವಾಮಿ ಕಲಾ ಮಂದಿರ ಮಾಧವ ಸ್ವಾಮಿ ಭಾಗವಹಿಸಲಿದ್ದಾರೆ. ಜೂನ್ ೭ರಂದು ಸಾಯಂಕಾಲ ೫.೩೦ಕ್ಕೆ ನಡೆಯುವ ಭಗವದರ್ಪಣಾ ಕಾರ್ಯಕ್ರಮ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ವಹಿಸಲಿದ್ದಾರೆ. ಭಗವದರ್ಪಣೆಯ ಮಾತನ್ನು ಚಿಂತಕ ಲಕ್ಷ್ಮೀಶ ತೋಳ್ಪಾಡಿ ನಡೆಸಲಿದ್ದಾರೆ. ಬಿರುಮಲೆ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net