ಪುತ್ತೂರು: ಇತ್ಯರ್ಥವಾದ ಪ್ರಕರಣದ ಬಗ್ಗೆ ಐಎಂಎ ಹಾಗೂ ಪುತ್ತಿಲ ಪರಿವಾರ ಸೇರಿಕೊಂಡು ಮಹಿಳಾ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಾಗುತ್ತದೆ. ಬೆಳಗ್ಗೆ ೮ ಗಂಟೆ ಒಳಗೆ ಬಂಽಸದಿದ್ದರೆ, ಪ್ರತಿಭಟಿಸುವ ಎಚ್ಚರಿಕೆ ನೀಡುತ್ತಾರೆ. ಐಎಂಎ ಹಾಗೂ ಪುತ್ತಿಲನಿಗೂ ಏನು ಸಂಬಂಧ ಎಂದು ದಕ್ಷಿಣ ಕನ್ನಡ ಯುವಜನ ಪರಿಷತ್ನ ಅಶ್ರಫ್ ಕಲ್ಲೇಗ ಆರೋಪಿಸಿದರು.
ಬಾಣಂತಿ ಹಾಸಿಗೆಯಲ್ಲಿ ಕುಳಿತವರನ್ನು ವೈದ್ಯರು ಅನ್ಎಜುಕೇಟೆಡ್ ಎಂದು ಬೈದಿದ್ದು, ಇದನ್ನು ಸಮಾಧಾನದಿಂದ ಹೇಳುವಂತೆ ಜೋಹರಾ ಪುತ್ರ ಹೇಳಿದ್ದಕ್ಕೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಪೊಲೀಸ್ ದೂರು ನೀಡಿ ಮೊಬೈಲ್ನಲ್ಲಿದ್ದ ವಿಡಿಯೋ ಡಿಲೀಟ್ ಮಾಡಿಸಿ ಕಳುಹಿಸಿ ಮಾತುಕತೆಯಲ್ಲಿ ಪ್ರಕರಣ ಇತ್ಯರ್ಥವಾಗಿತ್ತು. ಸರ್ಕಾರಿ ಆಸ್ಪತ್ರೆಗೆ ಸಂಬಂಽಸಿದ ಅಽಕಾರಿಗಳಿದ್ದಾರೆ, ಆರೋಗ್ಯ ರಕ್ಷಾ ಸಮಿತಿ ಪದಾಽಕಾರಿಗಳಿದ್ದಾರೆ, ಶಾಸಕರಿದ್ದಾರೆ ಅವರಿಗೆ ಮಾಹಿತಿ ನೀಡಿಲ್ಲ. ಏಕಾಏಕಿ ಹಿಂದು ಸಂಘಟನೆಯನ್ನು ಕರೆದು ದೂರು ನೀಡುವ ಉದ್ದೇಶ ಏನು? ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಪುತ್ತಿಲ ಅವರಿಂದ ಕೋಮುಗಲಭೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಠಾಣೆಗೆ ದೂರು ನೀಡಿದ್ದೇವೆ. ಪುತ್ತೂರಿನಲ್ಲಿ ರಸ್ತೆ ತಡೆ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಬೇಕು ಎಂದು ಆಗ್ರಹಿಸಿದರು. ದಕ್ಷಿಣ ಕನ್ನಡ ಯುವಜನ ಪರಿಷತ್ ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಕೋಶಾಽಕಾರಿ ಬಾವು ಪಡೀಲು, ಮುಖಂಡ ಹಮೀದ್ ಸಾಲ್ಮರ ಉಪಸ್ಥಿತರಿದ್ದರು.