ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವಕ್ಕೆ ಜೋನ್ ೫ರ ಆರ್ಐ ಜಿಲ್ಲೆ ೩೧೮೧ರ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಅವರ ಅಽಕೃತ ಬೇಟಿ ಕಾರ್ಯಕ್ರಮ ಮಾ.೧೯ರಂದು ನಡೆಯಲಿದೆ. ಪುತ್ತೂರು ಯುವ ೧೦ನೇ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ಪುತ್ತೂರು ಯುವ ಅಧ್ಯಕ್ಷೆ ಅಶ್ವಿನಿ ಮುಳಿಯ ಹೇಳಿದರು.
ಬೆಳಗ್ಗೆ ೧೦ ಗಂಟೆಗೆ ಜಿಲ್ಲಾ ಗವರ್ನರ್ ಅವರನ್ನು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಸ್ವಾಗತಿಸಿಕೊಂಡು, ಅಸಿಸ್ಟೆಂಟ್ ಗವರ್ನರ್ ಡಾ. ಹರ್ಷ ಕುಮಾರ್ ರೈ ಪ್ರಾಯೋಜಕತ್ವದಲ್ಲಿ ವಾಟರ್ ಫಿಲ್ಟರ್ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಲಿದ್ದೇವೆ. ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ಮಾಡಿ ರೋಟರಿ ಕ್ಲಬ್ ವತಿಯಿಂದ ನೀಡಿದ ಪ್ರಾಜೆಕ್ಟ್ ವೀಕ್ಷಣೆ ಹಾಗೂ ನೀರು ಮರುಬಳಕೆ ಘಟಕದಲ್ಲಿ ನೂತನವಾಗಿ ಮಾಡಿದ ವ್ಯವಸ್ಥೆಯ ಹಸ್ತಾಂತರ ನಡೆಯಲಿದೆ. ಶಾಸಕರ ಭವನದ ಬಳಿಯಲ್ಲಿ ನವೀಕೃತಗೊಂಡ ಮಹಿಳಾ ಸಾಂತ್ವನ ಕೇಂದ್ರಕ್ಕೆ ಅಗತ್ಯ ಪೀಠೋಪಕರಣಗಳ ಕೊಡುಗೆ ರೋಟರಿ ಕ್ಲಬ್ ಪುತ್ತೂರು ವತಿಯಿಂದ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೧೧ ಗಂಟೆಗೆ ಕಬಕ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರ ಕೊಠಡಿಯಲ್ಲಿ ಮಕ್ಕಳಿಗೆ ಎದೆಹಾಲು ನೀಡುವ ಕೇಂದ್ರ ಹಾಗೂ ಶಿಶುಪಾಲನ ಕೇಂದ್ರದ ಉದ್ಘಾಟನೆ ನಡೆಯಲಿದೆ. ಫಿಲೋ ನಗರದಲ್ಲಿ ಸಚ್ಚಿದಾನಂದ ಸಭಾಂಗಣದಲ್ಲಿ ಕ್ಲಬ್ ಅಸೆಂಬ್ಲಿ ನಡೆಯಲಿದೆ. ಸಂಜೆ ೭ ಗಂಟೆಗೆ ಪುತ್ತೂರು ಎ.ಪಿ.ಎಂ.ಸಿ. ರಸ್ತೆಯ ದಿ ಪುತ್ತೂರು ಗಾರ್ಡನ್ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ವಲಯ ೫ರ ಡಾ.ಹರ್ಷ ಕುಮಾರ್, ಲೆಫ್ಟಿನೆಂಟ್ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮತ್ತಿತರರು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಮೋಹನ್ ರಾವ್, ಡಾ.ಸುರೇಶ್ ಪುತ್ತೂರಾಯ, ಲಕ್ಷ್ಮೀಶ ಕೆ., ಚೇತನ್ ಪ್ರಕಾಶ್, ಉಮೇಶ್ ನಾಯಕ್ ಅವರಿಗೆ ಸನ್ಮಾನ ನಡೆಯಲಿದೆ ಎಂದರು.
ಕಾರ್ಯದರ್ಶಿ ವಚನ ಜಯರಾಮ್, ಪೂರ್ವಾಧ್ಯಕ್ಷ ಪಶುಪತಿ ಶರ್ಮ, ನಿಯೋಜಿತ ಅಧ್ಯಕ್ಷ ಕುಸುಮ್ ರಾಜ್ ಉಪಸ್ಥಿತರಿದ್ದರು.