ಅವಕಾಶವಾದಿಗಳ ವಿರುದ್ಧ ಸ್ಪರ್ಧೆ

Published on

ಪುತ್ತೂರು: ಟೌನ್ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ೨೦ ವರ್ಷ ಕೆಲಸ ನಿರ್ವಹಿಸಿ, ಆಧುನಿಕಗೊಳಿಸುವಲ್ಲಿ ಪಾತ್ರ ವಹಿಸಿರುವ ಜತೆಗೆ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಆಂತರಿಕ ಹಾಗೂ ಅವಕಾಶವಾದಿಗಳ ಕಾರಣದಿಂದ ಪ್ರತ್ಯೇಕವಾಗಿ ಸ್ಪಽಸಿದ್ದೇನೆ. ನಿರ್ದೇಶಕರಾದವರಿಗೆ ಬ್ಯಾಂಕಿಂಗ್ ಬಗ್ಗೆ ಮಾಹಿತಿಯಿರಬೇಕಾಗಿದೆ ಎಂದು ಪುತ್ತೂರು ಟೌನ್ ಕೋಪರೇಟಿವ್ ಬ್ಯಾಂಕ್ ಪಕ್ಷೇತರ ಅಭ್ಯರ್ಥಿ ಸದಾಶಿವ ಪೈ ಹೇಳಿದರು.

ಕೆಲವು ವ್ಯಕ್ತಿಗಳು ಮೊದಲೇ ನಿಶ್ಚಯಿಸಿದಂತೆ ಸ್ಥಾನಗಳನ್ನು ಪಡೆಯುವ ನಿಟ್ಟಿನಲ್ಲಿ ಷಡ್ಯಂತ್ರಗಳನ್ನು ಮಾಡಿದ್ದಾರೆ. ನಾಲ್ಕು ಮಂದಿ ಹಳಬರಿದ್ದು, ಉಳಿದವರೆಲ್ಲಾ ಹೊಸ ಮುಖ ಎಂಬುದನ್ನು ಮಾತುಕತೆಯ ಸಂದರ್ಭ ಹೇಳಿಕೊಂಡಿದ್ದರು. ಸಹಕಾರ ಭಾರತಿಯವರು ಅವಕಾಶ ನೀಡದ ಕಾರಣಕ್ಕೆ ಸ್ಪಽಸಿರುವುದಲ್ಲ. ಒಬ್ಬ ವ್ಯಕ್ತಿಯ ಹೆಸರು ಬಂದರೆ ಪಕ್ಷೇತರನಾಗಿ ಸ್ಪಽಸುವುದು ಖಚಿತ ಎಂಬುದನ್ನು ಮಾತುಕತೆಯ ಸಂದರ್ಭದಲ್ಲೇ ಕೇಳಿಕೊಂಡಿದ್ದೇನೆ. ಅವಕಾಶ ಕೊಡಿ ಎಂದು ಯಾರಲ್ಲೂ ಕೇಳಿಲ್ಲ. ಹಿರಿತನದಲ್ಲಿ ಸಮಾನತೆ ಎಲ್ಲರಿಗೂ ಬೇಕು. ಕಡೆಗಣನೆ ಮಾಡಿರುವುದಕ್ಕೆ ಚುನಾವನೆಯಲ್ಲಿ ಸ್ಪಽಸುವ ಅನಿವಾರ್ಯತೆ ಮೂಡಿದೆ. ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಬೆಂಬಲಿತ ಎಂಬ ರೀತಿ ಬಿಂಬಿಸುತ್ತಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net