ಪುತ್ತೂರು: ಕೃಷಿಕರ ಮತವನ್ನು ಪಡೆದು ಅಽಕಾರ ಪಡೆದುಕೊಂಡಿರುವ ಸರ್ಕಾರ ರೈತರನ್ನು ಶೋಷಿಸುತ್ತಿದೆ. ವಿವಿಧ ಯೋಜನೆಯನ್ನು ಸ್ಥಗಿತ ಮಾಡಿ ರೈತ ವಿರೋಽಯಾಗಿದೆ. ವಿರೋಧ ಪಕ್ಷಗಳು ಸಮರ್ಥವಾಗಿ ಎದುರಿಸುವ ಕೆಲಸ ಮಾಡುತ್ತಿಲ್ಲ. ರೈತರು ತಿರುಗಿ ಬೀಳುವ ಮೊದಲು ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಹೇಳಿದರು.
ಕಿಸಾನ್ ಸಮ್ಮಾನ್ ಯೋಜನೆ ಸ್ಥಗಿತ, ಹಾಲು ಉತ್ಪಾದಕರಿಗೆ ವೈಜ್ಞಾನಿಕ ಬೆಲೆ ನೀಡದಿರುವುದು, ಪಂಪ್‌ಸೆಟ್ ಸಂಪರ್ಕಕ್ಕೆ ಹಣ ವಸೂಲಿ, ರೈತ ವಿದ್ಯಾರ್ಥಿನಿಽ ಸ್ಥಗಿತ ಮಾಡಿರುವುದು ಸರಿಯಲ್ಲ. ಕಂದಾಯ ಇಲಾಖೆಯ ದಾಖಲೆಗಳ, ಬಿತ್ತನೆ ಬೀಜದ ದರ ಹೆಚ್ಚಳ ಮಾಡಿರುವುದು ಸರಿಯಲ್ಲ. ಕೃಷಿಕರು ಬೀದಿಗಿಳಿದರೆ ಎಲ್ಲರೂ ತರಗೆಲೆಗಳಂತೆ ಉದುರಿಹೋಗಬೇಕಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಕುಮ್ಕಿ ಹೋರಾಟ ಸಮಿತಿಯ ಎಂ.ಜಿ.ಸತ್ಯನಾರಾಯಣ ಮಾತನಾಡಿ ಕುಮ್ಕಿ, ಕಾನ, ಬಾಣೆ ಭೂಮಿಯ ಸಾಗುವಳಿ ಚೀಟಿಯನ್ನು ಕಾನೂನುಬದ್ಧವಾಗಿ ನೀಡಬೇಕು. ಕುಮ್ಕಿ ಹಕ್ಕು ರದ್ದುಪಡಿಸಿ ಬೇಕಾದವರಿಗೆ ನೀಡುವ ಜಿಲ್ಲಾಡಳಿತದ ಕ್ರಮ ಸರಿಯಲ್ಲ. ರೈತರ ದಾಖಲೆಗಳನ್ನು ಸರಿಪಡಿಸಿ ಕೊಟ್ಟು ಅಲೆದಾಡಿಸುವುದನ್ನು ತಪ್ಪಿಸಬೇಕು. ಕಾನೂನಿನ ಹೆಸರಿನಲ್ಲಿ ಹಿಂಸಿಸುವ ಬದಲು, ರೈತರಾಗಿ ಬಾಳಲು ಬಿಡಬೇಕು ಎಂದು ಆಗ್ರಹಿಸಿದರು.
ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಅಂಬುಜಾಕ್ಷ, ಜಿಲ್ಲಾ ಮಹಿಳಾ ಪ್ರಮುಖ ಶಾಂಭವಿ ಉಪಸ್ಥಿತರಿದ್ದರು.