ಟವರ್ ನಿರ್ಮಾಣದ ವಿರುದ್ಧ ಧ್ವನಿಯೆತ್ತದವರಿಗೆ ಪಿಂಡ ಪ್ರದಾನ - ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಆಕ್ರೋಶ

WhatsApp Image 2024-11-28 at 21.23.48_04074b5f
Published on

ವಿಟ್ಲ: ಯುಪಿಸಿಎಲ್‌ನಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಸಾಧ್ಯವಿಲ್ಲದಿದ್ದರೂ ಬೋಗಸ್ ಯೋಜನೆಯನ್ನು ಜಾರಿ ಮಾಡುವ ಉದ್ದೇಶವೇನೆಂಬುದನ್ನು ತಿಳಿಸಬೇಕು. ಜನರಿಗೆ ಮಾರಕವಾದ ವಿದ್ಯುತ್ ಪ್ರಸರಣ ಮಾರ್ಗವನ್ನು ಸಮುದ್ರ ಕಿನಾರೆ ಅಥವಾ ಹೆದ್ದಾರಿಯ ಬದಿಯಲ್ಲಿ ಭೂಗತ ಕೇಬಲ್ ಮೂಲಕ ತೆಗೆದುಕೊಂಡು ಹೋಗಬೇಕು. ಜಿಲ್ಲೆಯಲ್ಲಿ ಜನರ ಮಾರಣಹೋಮಕ್ಕೆ ವೇದಿಕೆ ನಿರ್ಮಾಣವಾಗುತ್ತಿದ್ದರೂ, ಯಾವೊಬ್ಬ ನಾಯಕರೂ ಮುಂದೆ ಬಾರದೆ ಅದಾನಿಯ ಹಿಂದೆ ಅಡಗಿ ಕೂತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಕಂಪನಿಯ ಅಡಿಯಾಳುಗಳಾಗಿದ್ದು, ಕಂಪನಿ ಪರವಿರುವ ಎಲ್ಲರಿಗೂ ಶೀಘ್ರದಲ್ಲಿ ಜಿಲ್ಲಾಡಳಿತ ಕಚೇರಿ ಮುಂಭಾಗದಲ್ಲಿ ಪಿಂಡ ಪ್ರದಾನ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಹೇಳಿದರು.

ಅದಾನಿ ಗ್ರೂಪ್‌ನ ಸ್ಟೆರ್ಲೈಟ್ ಕಂಪನಿಯಲ್ಲಿ ಬಾಂಗ್ಲಾದೇಶದ ಪ್ರಜೆಗಳು ಕೆಲಸ ನಿರ್ವಹಿಸುತ್ತಿರುವ ಅನುಮಾನವಿದ್ದು, ಇದರ ಬಗ್ಗೆ ಜಿಲ್ಲಾಡಳಿತ ಚಕಾರ ಎತ್ತುತ್ತಿಲ್ಲ. ಜಿಲ್ಲಾಡಳಿತ ಹಾಗೂ ಜನಪ್ರತಿನಿಽಗಳು ಕಂಪನಿಯ ಬ್ರೋಕರ್ ಆಗಿ ರೈತರ ಪರ ಮಾತೆತ್ತುತ್ತಿಲ್ಲ. ಕೇಂದ್ರ, ರಾಜ್ಯ ಸರ್ಕಾರ ಮಾಡಿದ ನಿಯಮ ಪಾಲಿಸುವುದು ಬಿಟ್ಟು, ಮೌಖಿಕ ಆದೇಶ ಮಾಡಿ ಸಂತ್ರಸ್ತರನ್ನು ಹೆದರಿಸುತ್ತಿದೆ. ಕಂದಾಯ, ಪೊಲೀಸ್, ಅರಣ್ಯ ಇಲಾಖೆ ಅಽಕಾರಿಗಳು ಕಂಪನಿಗೋಸ್ಕರ ದುಡಿಯುತ್ತಿದ್ದಾರೆ. ಅರಣ್ಯ ಇಲಾಖೆ ಅದಾನಿ ಕಂಪನಿ ಆದೇಶ ಪಾಲಿಸಿ ೧೦ ಸಾವಿರಕ್ಕೂ ಅಽಕ ಮರಗಳ ಮಾರಣ ಹೋಮ ಮಾಡುತ್ತಿದೆ. ಪರಿಸರವಾದಿಗಳು, ಅರಣ್ಯ ರಕ್ಷಕರು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದರು.

ಹೋರಾಟ ಸಮಿತಿಯ ಚಿತ್ತರಂಜನ್ ಎನ್. ಎಸ್. ಡಿ., ರೋಹಿತಾಶ್ವ ಬಂಗ, ಶ್ಯಾಮ್ ವಿಟ್ಲ ಉಪಸ್ಥಿತರಿದ್ದರು.

೧.೬೫ ಲಕ್ಷ ಅಡಕೆ ಮರ ನಾಶ

ವಿದ್ಯುತ್ ಪ್ರಸರಣ ಮಾರ್ಗ ಯೋಜನೆಯಿಂದ ೩೪೫೦ ಎಕರೆ ಕೃಷಿ ಭೂಮಿ ನಾಶವಾಗಿ, ಅಂದಾಜು ೧.೬೫ ಲಕ್ಷ ಅಡಕೆ ಮರ, ೧.೨೦ ಲಕ್ಷ ಕಾಳುಮೆಣಸು ಬಳ್ಳಿಗೆ ಹಾನಿಯಾಗಲಿದೆ. ನಾಲ್ಕೂವರೆ ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ, ಜಿಲ್ಲಾಽಕಾರಿ, ಸಹಾಯಕ ಆಯುಕ್ತರು ವಿವರವಾದ ಮಾಹಿತಿಯನ್ನು ನೀಡುತ್ತಿಲ್ಲ. ಶೇ.೯೭ಮಂದಿಗೆ ಅಪಾಯಕಾರಿ ವಿದ್ಯುತ್ ಮಾರ್ಗದ ಬಗ್ಗೆ ಅರಿವಿಲ್ಲ. ರೈತರ ಅರ್ಜಿ, ಮನವಿಗೆ ಉತ್ತರ ನೀಡದೆ ಸಾಕ್ಷರತಾ ಜಿಲ್ಲೆಯ ಆಡಳಿತದಲ್ಲಿ ಅರಾಜಕತೆ ಕಾಣಿಸುತ್ತಿದೆ ಎಂದು ವಿದ್ಯುತ್ ಪ್ರಸರಣ ಮಾರ್ಗ ವಿರೋಽ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಹೇಳಿದರು.

ಶಿಷ್ಟಾಚಾರವನ್ನು ಪಾಲಿಸದೆ ಅಕ್ರಮವಾಗಿ ಗೋಪುರದ ನಿರ್ಮಾಣವಾಗುತ್ತಿದೆ. ಈಬಗ್ಗೆ ಅಽಕಾರಿ ವರ್ಗಕ್ಕೆ ಹಲವು ಬಾರಿ ಮನವರಿಕೆ ಮಾಡಿದರೂ ಸ್ಪಂದಿಸುತ್ತಿಲ್ಲ. ಅರಣ್ಯ ಪ್ರದೇಶದಲ್ಲಿ ಹಾಗೂ ಖಾಸಗಿ ಪ್ರದೇಶಗಳಲ್ಲಿ ಮರಗಳನ್ನು ಕಡಿಯುವ ಹಾಗಿಲ್ಲ. ಕಾಯ್ದೆಯ ಪ್ರಕಾರ ಸಮಿತಿಯನ್ನು ರಚನೆ ಮಾಡಿ ಅವರಿಂದ ನಿರ್ಣಯ ಕೈಗೊಂಡ ಬಳಿಕ ಮರ ತೆರವು ಮಾಡಬೇಕು. ಈ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಹಣದ ಆಮಿಷದ ಮೂಲಕ ಕೆಲಸ ನಡೆಸುತ್ತಿದ್ದಾರೆ.

| ಶ್ಯಾಮ್ ಸಂತ್ರಸ್ತ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net