೧೭ರಂದು ನೃತ್ಯೋತ್ಕೃಮಣ ಕಾರ್ಯಕ್ರಮ

Published on


ಪುತ್ತೂರು: ಶ್ರೀ ಮುಕಾಂಬಿಕಾ ಕಲ್ಚರಲ್ ಅಕಾಡೆಮಿಯ ೩ನೇ ವರ್ಷದ ನೃತ್ಯೋತ್ಕೃಮಣ-೨೦೨೪ ಕಾರ್ಯಕ್ರಮ ಅ.೧೭ರಂದು ೫.೩೦ರಿಂದ ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ವಿ. ದೀಪಕ್ ಕುಮಾರ್ ಹೇಳಿದರು.


ಸಭಾ ಕಾರ್ಯಕ್ರಮವನ್ನು ಮಂಗಳೂರಿನ ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಉದ್ಘಾಟಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಭಾಗವಹಿಸಲಿದ್ದಾರೆ. ಪುತ್ತೂರು ಮಹಾಲಿಂಗೇಶ್ವರನ ಪದವರ್ಣವನ್ನು ಸುಮಂಗಲಾ ರತ್ನಾಕರ್ ಬರೆದಿದ್ದು, ಇದಕ್ಕೆ ಪ್ರದರ್ಶನ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


೧೧ ವರ್ಷದ ಬಳಿಕ ನಾವು ಯುಗಳ ನೃತ್ಯ ಪ್ರದರ್ಶನ ನೀಡುತ್ತಿದ್ದು, ನಟುವಾಂಗದಲ್ಲಿ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು, ಹಾಡುಗಾರಿಕೆಯಲ್ಲಿ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ಮೃದಂಗದಲ್ಲಿ ವಿನಯ್ ನಾಗರಾಜನ್ ಬೆಂಗಳೂರು, ಕೊಳಲಿನಲ್ಲಿ ವಿವೇಕ್ ಕೃಷ್ಣ ಬೆಂಗಳೂರು ಸಹಕಾರ ನೀಡಲಿದ್ದಾರೆ. ದೇವ್ ಪ್ರೋ ಸೌಂಡ್ಸ್ ಮಂಗಳೂರು ಧ್ವನಿ ಬೆಳಕು ನೀಡಿದರೆ, ಪುತ್ತೂರು ಭಾವನಾ ಕಲಾ ಆರ್ಟ್ಸ್ ರಂಗಾಲಂಕಾರ ಮಾಡಲಿದ್ದಾರೆ ಎಂದರು. ಅಕಾಡೆಮಿಯ ಪ್ರೀತಿಕಲಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net