

ಪುತ್ತೂರು: ವಾಟ್ಸ್ಯಾಪ್ ಗ್ರೂಪ್‌ಗೆ ಸೇರಿಸಿದ್ದೇನೆ ಎಂದು ಬಿಜೆಪಿ ಮುಖಂಡರೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ನನ್ನ ವಾಟ್ಸ್ಯಾಪ್ ಬ್ಲಾಕ್ ಮಾಡಲಾಗಿದೆ. ಗ್ರೂಪ್‌ಗೆ ನಾನು ಸೇರಿಸಿರುವುದಕ್ಕೆ ಸರಿಯಾದ ದಾಖಲೆಯನ್ನು ನೀಡಬೇಕು. ಬಿಜೆಪಿಗೆ ಸೋಲಿನ ಬೀತಿ ಇರುವ ಕಾರಣ ಕಾಂಗ್ರೆಸ್ ಪರ ಕೆಲಸ ಮಾಡುವವರಿಗೆ ಅಡ್ಡಿ ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಹೇಳಿದರು.
ಪಕ್ಷದ ಹಲವು ಪದಾಽಕಾರಿಗಳ ಸಂಪರ್ಕ ಸಾಽಸಲು ಸಾಧ್ಯವಾದಂತಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ದೂರು ಕೊಟ್ಟ ಹಾಗೆ ಕಾಣುತ್ತಿದೆ. ಕಾನೂನನ್ನು ದುರುಪಯೋಗ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ೪೦೦ ಸೀಟು ಗೆಲ್ಲುವ ಅವಕಾಶ ಇದ್ದರೆ ವಿಪಕ್ಷದವರನ್ನು ಬೆದರಿಸುವ ಅಗತ್ಯವಿತ್ತಾ? ಐಟಿ, ಇಡಿ ಸೇರಿ ವಿವಿಧ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮೋದಿಯವರು ರೋಡ್ ಶೋ ಮಾಡಿದಲ್ಲಿ ಬಿಜೆಪಿ ಸೋತದ್ದು ನಮಗೆ ತಿಳಿದಿರುವ ವಿಚಾರವಾಗಿದೆ. ಸಭೆಯಲ್ಲಿ ಹೇಳಿಕೊಳ್ಳಲು ವಿಷಯ ಇಲ್ಲದ ಕಾರಣ ಸಭೆಯನ್ನು ಮಾಡುತ್ತಿಲ್ಲ ಎಂದು ಗುರುವಾರ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಿಯಸ್, ಉಸ್ತುವಾರಿ ಮಹೇಶ್ ಅಂಕೊತ್ತಿಮಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಜಿತ್ ಬಂಗೇರ ಉಪಸ್ಥಿತರಿದ್ದರು.