ಪೂಂಜ ಟೀಕೇ ಖಂಡನೀಯ : ಗಣೇಶ್ ಪೂಜಾರಿ ಗುರುಪುರ ಹೇಳಿಕೆ

Published on

ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸುದ್ದಿಗೋಷ್ಠಿಯಲ್ಲಿ ಮಾಡಿರುವ ಆರೋಪವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಮತ್ತು ರಾಷ್ಟೀಯ ಬಿಲ್ಲವರ ಮಹಾ ಮಂಡಲದ ಕಾರ್ಯದರ್ಶಿ ಗಣೇಶ್ ಪೂಜಾರಿ ಗುರುಪುರ ಹೇಳಿದರು.

ಶನಿವಾರ ಬೆಳ್ತಂಗಡಿ ಗುರುನಾರಾಯಣ ಸಂಘದ ಸಭಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯದಲ್ಲಿ ಆರೋಪ, ಪ್ರತ್ಯಾರೋಪ ನಿಂದನೆ ಏನೇ ಇದ್ದರೂ ಕಾನೂನಾತ್ಮವಾಗಿ ಪೂರಕ ದಾಖಲೆಗಳೊಂದಿಗೆ ಉತ್ತರ ಕೊಡುವುದು ರಾಜಕೀಯ ಧರ್ಮ. ಬೆಂಗಳೂರು ಭೂಗತ ಲೋಕದ ಹುಟ್ಟಡಗಿಸಿ ಕ್ರಿಮಿನಲ್‌ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ಬಿಲ್ಲವ ಸಮಾಜದ ಗೌರವಾನ್ವಿತ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂರವರು, ಮುಖ್ಯಮಂತ್ರಿ ಪದಕ ಪುರಸ್ಕೃತ ನಿವೃತ್ತ ಪೊಲೀಸ್ ವರಿಷ್ಠ ಅಧಿಕಾರಿ ಪೀತಾಂಬರ ಹೆರಾಜೆಯವರ ಬಗ್ಗೆ ಈ ಹಿಂದೆಯೂ ಶಾಸಕ ಹರೀಶ್ ಪೂಂಜರವರು ನಿಂದನಾತ್ಮಕವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವುದು ಅತ್ಯಂತ ಖಂಡನೀಯ ಎಂದರು.

ಗೋಷ್ಠಿಯಲ್ಲಿ ಮುಗ್ಗ ಗುತ್ತು ಟ್ರಸ್ಟ್ ಪ್ರತಿನಿಧಿ ಪ್ರಶಾಂತ್ ಬಂಗೇರ, ಸಮಾಜದ ಹಿರಿಯ ನಾಯಕ ಜನಾರ್ದನ ಪೂಜಾರಿ ಗೇರುಕಟ್ಟೆ,, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷರುಗಳಾದ ಜಯರಾಮ ಬಂಗೇರ ಹೇರಾಜೆ, ಚಿದಾನಂದ ಪೂಜಾರಿ ಎಲ್ದಕ್ಕ, ಮಾಜಿ ನಿರ್ದೇಶಕ ವಿಶ್ವನಾಥ ಪೂಜಾರಿ ಕೊಲ್ಲಾಜೆ, ಜಿಪ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net