ಅಭೂತಪೂರ್ವ ಅನುಭವ ನೀಡಿದ ಮುದ್ರಣ, ವಿದ್ಯಾರ್ಥಿಗಳಿಂದ ವಿಜಯವಾಣಿ ಪ್ರಿಂಟಿಂಗ್ ಪ್ರೆಸ್ ವೀಕ್ಷಣೆ

IMG_20250328_203847_319-2.jpg
Published on

ಹುಬ್ಬಳ್ಳಿ: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗದ ಬಗ್ಗೆ ಕೇವಲ ಪುಸ್ತಕದಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಶುಕ್ರವಾರ ಇದರ ಬಗ್ಗೆ ಪ್ರಾಯೋಗಿಕವಾಗಿ ತಿಳಿದುಕೊಳ್ಳುವ ಮೂಲಕ ಅಭೂತಪೂರ್ವ ಅನುಭವ ಪಡೆದುಕೊಂಡರು.

ವರೂರಿನಲ್ಲಿರುವ ವಿಜಯವಾಣಿ ಮುದ್ರಣ ವಿಭಾಗಕ್ಕೆ ಭೇಟಿ ನೀಡಿದ ತಾಲೂಕಿನ ಅಂಚಟಗೇರಿಯಲ್ಲಿರುವ ಕರ್ನಾಟಕ ಸರ್ಕಾರದ ಡಾ. ಎಪಿಜೆ ಅಬ್ದುಲ್ ಕಲಾಂ ರೆಸಿಡೆನ್ಶಿಯಲ್ ಸ್ಕೂಲ್ ಹಾಗೂ ಕಾಲೇಜಿನ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಹೊಸ ಅನುಭವ ಪಡೆದರು.

ಕನ್ನಡದ ನಂಬರ್ ಒನ್ ಪತ್ರಿಕೆ ವಿಜಯವಾಣಿಯ ಸಂಪಾದಕೀಯ ವಿಭಾಗ, ಜಾಹೀರಾತು, ಪ್ರಸಾರಾಂಗ ಹೀಗೆ ವಿವಿಧ ವಿಭಾಗಗಳ ಕಾರ್ಯವೈಖರಿ ಹಾಗೂ ಅದು ಮುದ್ರಣವಾಗುವ ವಿಧಾನಗಳನ್ನು ವೀಕ್ಷಣೆ ಮಾಡಿದರು. ಇದೆಲ್ಲವನ್ನು ಸ್ವತಃ ನೋಡಿ ಆನಂದಿಸುವ ಅದ್ಭುತ ಅವಕಾಶ ನೀಡಿದ ವಿಆರ್ಎಲ್ ಮೀಡಿಯಾ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಸಮಗ್ರ ಮಾಹಿತಿಪೂರ್ಣ ಪತ್ರಿಕೆಯನ್ನು ಓದುಗರಿಗೆ ನೀಡುವದರ ಜತೆಗೆ ಹತ್ತಾರು ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕಳಕಳಿ ಹೊಂದಿರುವ ಪತ್ರಿಕೆಯೊಂದಿಗೆ ನಮಗೂ ಬೆರೆಯುವ ಅವಕಾಶ ನೀಡಿರುವುದು ಹೆಮ್ಮೆಯ ಸಂಗತಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net