ಅಕಾಡೆಮಿ ಮಕ್ಕಳಿಂದ ವಿಜಯವಾಣಿ ಮುದ್ರಣ ವೀಕ್ಷಣೆ,  ಅತ್ಯಾಧುನಿಕ ತಂತ್ರಜ್ಞಾನ ಕಂಡು ಚಕಿತರಾದ ವಿದ್ಯಾರ್ಥಿಗಳು

wp-1747408423961.jpg
Published on

ಹುಬ್ಬಳ್ಳಿ: ಕನ್ನಡದ ನಂಬರ್ ಒನ್ ಪತ್ರಿಕೆ ವಿಜಯವಾಣಿ ಸದಾ ಹೊಸತನಕ್ಕೆ ತೆರೆದುಕೊಂಡು ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದ್ದು, ಇದೀಗ ವಿದ್ಯಾರ್ಥಿಗಳಿಗೆ ಮುದ್ರಣ ಘಟಕ ವೀಕ್ಷಣೆಗೆ ಅವಕಾಶ ನೀಡುವ ಮೂಲಕ ಅವರಿಗೆ ಹೊಸ ಲೋಕದ ಪರಿಚಯ ಮಾಡಿಕೊಡುತ್ತಿದೆ.

ನಗರದಲ್ಲಿರುವ ಸಂಶಿ ಸ್ಪೋರ್ಟ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ಶುಕ್ರವಾರ ವರೂರಿನ ವಿಜಯವಾಣಿ ಮುದ್ರಣ ವಿಭಾಗಕ್ಕೆ ಭೇಟಿ ನೀಡಿದರು. ಮಾಧ್ಯಮ ಸಂಸ್ಥೆ ಹಾಗೂ ಅದರ ಮುದ್ರಣ ಕಾರ್ಯವನ್ನು ವೀಕ್ಷಣೆ ಮಾಡಿದ ವಿದ್ಯಾರ್ಥಿಗಳು ಅನೇಕ ಹೊಸ ವಿಷಯಗಳನ್ನು ತಿಳಿದುಕೊಂಡರು.

ಬೇಸಿಗೆ ರಜೆಯಲ್ಲಿ ಪಠ್ಯೇತರ ಚಟುವಟಿಕೆಗೆ ಮಕ್ಕಳು ಹಾಗೂ ಪಾಲಕರು ಮಹತ್ವ ನೀಡುತ್ತಾರೆ. ಅಕಾಡೆಮಿಯಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗುವ ಮಕ್ಕಳು ಇಂದು ಮುದ್ರಣ ವಿಭಾಗಕ್ಕೆ ಬಂದು ಹೊಸದೊಂದು ಜ್ಞಾನ ಸಂಪಾದನೆ ಮಾಡಿಕೊಂಡರು. ಪ್ರಿಂಟಿಂಗ್ ನಲ್ಲಿನ ಹೊಸ ಆಯಾಮಗಳನ್ನು ಕಂಡು ಚಕಿತರಾದರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾರಂಗವು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ನಂತರ ಎಷ್ಟು ಮಹತ್ವದ್ದು ಎಂಬುದನ್ನು ಅರಿತುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net