

ಹುಬ್ಬಳ್ಳಿ: ನಿತ್ಯವೂ ಮನೆಗೆ ಬರುವ ಕನ್ನಡದ ನಂಬರ್ ಒನ್ ಪತ್ರಿಕೆ ವಿಜಯವಾಣಿಯ ಮುದ್ರಣ ವಿಭಾಗ ವೀಸಲು ತುಂಬಾ ಉತ್ಸುಕರಾಗಿದ್ದ ವಿದ್ಯಾರ್ಥಿಗಳು ಶುಕ್ರವಾರ ಭೇಟಿ ನೀಡುವ ಮೂಲಕ ಮಾಹಿತಿ ಕಲೆ ಹಾಕಿದರು.
ನಗರದ ಪೆಂಡಾರ್ ಗಲ್ಲಿಯ ಸರ್ಕಾರಿ ಪ್ರೌಢಶಾಲೆಯ 50ಕ್ಕೂ ಹೆಚ್ಚು ಮಕ್ಕಳು ತಾಲೂಕಿನ ವರೂರಿನಲ್ಲಿರುವ ಪ್ರಿಂಟಿಂಗ್ ಪ್ರೆಸ್ ಗೆ ಭೇಟಿ ನೀಡಿದರು. ಮುಖ್ಯ ಶಿಕ್ಷಕರು, ಸಹ ಶಿಕ್ಷಕರ ಜತೆಗೆ ಆಗಮಿಸಿದ ವಿದ್ಯಾರ್ಥಿಗಳು ಅತ್ಯಂತ ಕುತೂಹಲದಿಂದ ವಿಜಯವಾಣಿ ಮುದ್ರಣವಾಗುವುದನ್ನು ನೋಡಿದರು.
ಇದು ತಮ್ಮ ವಿದ್ಯಾರ್ಥಿ ಜೀವನದ ಅತ್ಯಂತ ನೆನಪಿಡುವ ಕ್ಷಣವಾಗಿದೆ. ಪತ್ರಿಕಾ ರಂಗದಲ್ಲಿಯೇ ವಿಶೇಷತೆ ಮೆರೆದಿರುವ ವಿಜಯವಾಣಿಯು ಹೇಗೆಲ್ಲ ಮುದ್ರಣಗೊಂಡು ನಮ್ಮ ಮನೆಗಳಿಗೆ ತಲುಪುತ್ತದೆ ಎಂಬುದನ್ನು ಸವಿಸ್ತಾರವಾಗಿ ತಿಳಿದುಕೊಂಡೇವು ಎಂದು ಹೆಮ್ಮೆಯಿಂದ ಹೇಳಿದರು.
ನಮ್ಮ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಜಯವಾಣಿ ಮುದ್ರಣ ಘಟಕಕ್ಕೆ ಭೇಟಿ ನೀಡಿದರು. ಇಲ್ಲಿ ಪತ್ರಿಕೆ ಹೇಗೆ ತಯಾರಾಗುತ್ತದೆ ಎಂಬುದರ ಸವಿಸ್ತಾರ ಮಾಹಿತಿ ತಿಳಿದರು. ಮಕ್ಕಳು ಖುಷಿ ಪಟ್ಟರು. ಹೊಸ ವಿಚಾರಗಳನ್ನು ಕಲಿಯುವ ಮೂಲಕ ಅವರಿಗೆ ತುಂಬಾ ಉಪಯುಕ್ತವಾಯಿತು. ಪ್ರಿಂಟಿಂಗ್ ಪ್ರೆಸ್ ನೋಡಲು ಅವಕಾಶ ಮಾಡಿಕೊಟ್ಟ ವಿ ಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೆಶ್ವರ ಅವರಿಗೆ ಧನ್ಯವಾದ ತಿಳಿಸುತ್ತೇವೆ ಎಂದು ಸಹ ಶಿಕ್ಷಕ ನಾಗರಾಜ ಹಾಲಬಾವಿ ತಿಳಿಸಿದರು.
ಶುಭಂ ಭಜಂತ್ರಿ,
ರಕ್ಷಿತಾ ಹಬೀಬ, ಮುಖ್ಯೋಪಾಧ್ಯಾಯರಾದ ದೀಪಾ ಹಿರೇಗೌಡರ, ಇತರರು ಇದ್ದರು.
,