ಬೆಂಗಳೂರು: ಇಂದು (ಅ.23) ಸಂಜೆ 6.30ಕ್ಕೆ ಬೆಂಗಳೂರು ಅರಮನೆ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಸಭಾಂಗಣದಲ್ಲಿ (ಮಹಾರಾಣಿ ವಿಜ್ಞಾನ ಕಾಲೇಜಿನ ಪಕ್ಕದಲ್ಲಿ) ‘ನವಿಲು ಪುರಾಣ’ ಎಂಬ ನಾಟಕ ಪ್ರದರ್ಶನವಾಗಲಿದ್ದು, ಎಲ್ಲರಿಗೂ ಪ್ರವೇಶ ಉಚಿತವಿರಲಿದೆ.
ಮಹಾನ್ ಉರ್ದು ಲೇಖಕ ಇನ್ತಿಜಾರ್ ಹುಸೇನರ ಕತೆಯಿಂದ ಪ್ರೇರಿತವಾದ ‘ನವಿಲು ಪುರಾಣ’ ವನ್ನು ಕನ್ನಡದಲ್ಲಿ ಸಾಂಸ್ಕೃತಿಕ ಲೋಕದಲ್ಲಿ ಕ್ರಿಯಾಶೀಲವಾಗಿರುವ ಪ್ರೊ. ಕೆ. ಈ. ರಾಧಾಕೃಷ್ಣ ಅವರು ಕಥಾರೂಪಕವಾಗಿ ರಚಿಸಿದ್ದಾರೆ. ಈ ನಾಟಕದ ರಂಗ ಪ್ರದರ್ಶನವನ್ನು ನಾಡಿನ ಶ್ರೇಷ್ಠ ರಂಗತಪಸ್ವಿ ಸುರೇಶ್ ಅನಗಳ್ಳಿಯವರು ನಿರ್ದೇಶಿಸಲಿದ್ದಾರೆ. ಬೆಂಗಳೂರಿನ 'ಅನೇಕ' ತಂಡವು ನಾಟಕವನ್ನು ಪ್ರದರ್ಶಿಸಲಿದೆ.
ಸುಮಾರು 1 ಗಂಟೆ 20 ನಿಮಿಷ ಇರುವ ನಾಟಕವು ಹಲವು ಗಣ್ಯರ ಸಮ್ಮುಖದಲ್ಲಿ ಪ್ರದರ್ಶನಗೊಳ್ಳಲಿದೆ. ನವಿಲು ಪುರಾಣ ನಾಟಕದ 3ನೇ ಪ್ರದರ್ಶನ ಇದಾಗಿದ್ದು, ಈಗಾಗಲೇ ಈ ನಾಟಕವನ್ನು ನೋಡಿದವರು ಇತ್ತೀಚೆಗೆ ಪ್ರದರ್ಶನಗೊಂಡ ಅತ್ಯುತ್ತಮ ಕನ್ನಡ ನಾಟಕಗಳಲ್ಲಿ ಒಂದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರಿಯಾದ ಸಮಯಕ್ಕೆ ಎಲ್ಲರು ಬಂದು ನಾಟಕವನ್ನು ಕಣ್ತುಂಬಿಕೊಂಡು, ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸುವಂತೆ ಪ್ರೊ.ಕೆ.ಈ. ರಾಧಾಕೃಷ್ಣ ಮತ್ತು ರಂಗತಪಸ್ವಿ ಸುರೇಶ್ ಅನಗಳ್ಳಿಯವರು ಮನವಿ ಮಾಡಿಕೊಂಡಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9845344054 ಮತ್ತು 9448050950 ಕ್ಕೆ ಕರೆ ಮಾಡಬಹುದಾಗಿದೆ.