ಪತ್ರಕರ್ತರಿಗೆ ಬರವಣಿಗೆಯೇ ಬೆನ್ನೆಲುಬು

web 1
Published on

ಧಾರವಾಡ: ಉತ್ತಮ ಪತ್ರಕರ್ತರಾಗಲು ಸಂವಹನ ಕಲೆ ಅಳವಡಿಸಿಕೊಳ್ಳುವುದು ಅವಶ್ಯಕ. ಪ್ರಸ್ತುತ ದಿನಗಳಲ್ಲಿ ಸಾಮÁಜಿಕ ಜಾಲತಾಣಗಳು ದಾರಿ ತಪ್ಪಿಸುವಂತಿದ್ದು, ಅದರ ಸತ್ಯಾಸತ್ಯೆಗಳನ್ನು ಪರಿಶೀಲಿಸಿ ಬರೆಯಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟೀçಯ ಕಾರ್ಯಕಾರಿಣಿ ಸದಸ್ಯ ಡಾ. ವೀರೇಶ ಬಾಳೆಕಾಯಿ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗುರುವಾರ ಹಮ್ಮಿಕೊಂಡಿದ್ದ `ಪತ್ರಿಕಾ ಪಥ': ಪತ್ರಿಕೋದ್ಯಮ ವಿದ್ಯಾರ್ಥಿಗಳ ಹಾಗೂ ಆಸಕ್ತ ಬರಹಗಾರರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಜೆ.ಎಂ. ಚಂದುನವರ ಮÁತನಾಡಿ, ಮÁಧ್ಯಮ ಸಾಕ್ಷರತೆ ಉತ್ತಮವಾಗಿರಬೇಕು. ಪತ್ರಿಕೋದ್ಯಮದಲ್ಲಿ ಹೊಸತನಕ್ಕೆ ನಮ್ಮನ್ನು ಒಡ್ಡಿಕೊಳ್ಳಬೇಕು ಎಂದರು.
ಪ್ರೊ. ವೇದಮೂರ್ತಿ ಮÁತನಾಡಿ, ಪ್ರಜಾಪ್ರಭÅತ್ವದಲ್ಲಿ ಪತ್ರಕರ್ತರ ಪಾತ್ರ ಬಹಳ ದೊಡ್ಡದು. ಪತ್ರಿಕಾ ರಂಗದಲ್ಲಿ ರಾಜಿ ಎನ್ನುವುದು ಇರಬಾರದು ಎಂದರು.
ಹರ್ಷವರ್ಧನ ಶೀಲವಂತರ ನಾಗರಿಕ ಪತ್ರಿಕೋದ್ಯಮ ಹಾಗೂ ಸಾಮÁಜಿಕ ಮÁಧ್ಯಮ, ಬಿರೇಶ ತಿರುಕಪ್ಪನವರ ಪತ್ರಿಕೋದ್ಯಮ ಅಂದು ಇಂದು ಮುಂದು ವಿಷಯ ಕುರಿತು ಮÁತನಾಡಿದರು.
ವಕೀಲ ಅನೂಪ ದೇಶಪಾಂಡೆ, ಪೃಥ್ವಿ ಕುಮÁರ್, ಮಣಿಕಂಠ, ಈರಪ್ಪ ಪತ್ತಾರ, ಉಲ್ಲಾಸ್ ಗೋಡಿ, ಮನೋಜ ಬಸನಿ, ಅರುಣ ಅಮರಗೋಳ, ವಿದ್ಯಾನಂದ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net