ಶಾಸಕರಿಂದ ಭ್ರಷ್ಟ ಅಧಿಕಾರಿಯನ್ನು ರಕ್ಷಿಸುವ ಹುನ್ನಾರ - ರಾಜೇಶ್ ಬನ್ನೂರು ಆರೋಪ

Published on

ಪುತ್ತೂರು: ಏಕ ವಿನ್ಯಾಸ ನಕ್ಷೆಯ ಅನುಮೋದನೆ ಆದೇಶದಲ್ಲಿ ಪುಡಾ ಅಧಿಕಾರಿಯ ಸಹಿಯನ್ನು ಪೋರ್ಜರಿ ಮಾಡಲಾದ ವಿಚಾರದಲ್ಲಿ ಮಾಧ್ಯಮಕ್ಕೆ ಕೊಟ್ಟ ಹೇಳಿಕೆ ಸಂಶಯಾಸ್ಪದವಾಗಿದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಶಾಸಕರೇ ಮುತುವರ್ಜಿ ವಹಿಸಿದಂತೆ ಕಾಣುತ್ತಿದೆ. ಭ್ರಷ್ಟ ಅಽಕಾರಿಗಳನ್ನು ಶಾಸಕರೇ ರಕ್ಷಿಸುವ ಕೆಲಸ ಮಾಡುತ್ತಿದ್ದೀರಾ ಎಂದು ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಪ್ರಶ್ನಿಸಿದ್ದಾರೆ.

ಪೋರ್ಜರಿ ಪ್ರಕರಣದ ಬಗ್ಗೆ ಧ್ವನಿ ಎತ್ತಿದ ತಮ್ಮದೇ ಪಕ್ಷದ ಮುಖಂಡ ಮಹಮ್ಮದ್ ಆಲಿ ವಿರುದ್ಧ ಈ ಬಗ್ಗೆ ಮಾತನಾಡಲು ಅವರು ಯಾರು? ಅವರಿಗೆ ಮಾತನಾಡುವ ಅಧಿಕಾರ ಇಲ್ಲ ಎಂಬ ಅರ್ಥದಲ್ಲಿ ಶಾಸಕರ ಹೇಳಿಕೆ ಕಾನೂನಿನ ಜ್ಞಾನದ ಕೊರತೆ ಇದೆ ಎಂದು ಕಾಣುತ್ತದೆ. ಭ್ರಷ್ಟ ವ್ಯವಸ್ಥೆ ಬಗ್ಗೆ, ಬೇರೆ ಯಾರೂ ಮಾತನಾಡಬಾರದೆಂದು ಕಾನೂನು ಇದೆಯೆ? ಅನ್ಯಾಯದ ವಿರುದ್ಧ ಮಾತನಾಡುವವರ ಬಾಯಿಗೆ ಬೀಗ ಹಾಕಲು ನಿಮ್ಮಿಂದ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಕಾನೂನು ಮೀರಿದ ನಡವಳಿಕೆಯನ್ನು ಶಾಸಕರು ಸರಿಪಡಿಸಬೇಕು. ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬಹುದು. ಆದರೆ ಕಚೇರಿಗಳಿಗೆ ದಾಳಿ ಮಾಡಿ ಕಡತ ಪರಿಶೀಲಿಸುವ ಅಽಕಾರ ನಿಮಗಿದೆಯಾ? ನೀವು ಹೊಸದಾಗಿ ಶಾಸಕರಾಗಿರುವುದರಿಂದ ನಿಮಗೆ ಅನುಭವದ ಕೊರತೆ ಇರಬಹುದು. ಈ ಬಗ್ಗೆ ಅರಿತವರಿಂದ ತಿಳಿಯುವುದು ಒಳ್ಳೆಯದು ಎಂದು ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net