ಶಾಸಕ ಶಿವಲಿಂಗೇಗೌಡ ನಡೆಗೆ ಖಂಡನೆ

g.v.t bsavaraj
Published on

ಅರಸೀಕೆರೆ : ಜೇನುಕಲ್ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರೀಯ ಲಾಂಛನಕ್ಕೆ ಅಗೌರವ, ಅಪಮಾನ ಮಾಡಿದ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ನಡೆ ಖಂಡನೀಯ ಎಂದು ಬಿಜೆಪಿ ಮುಖಂಡ ಜಿವಿಟಿ ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು.
ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹಿಸದ ವ್ಯಕ್ತಿಯನ್ನು ನಾಲ್ಕನೇ ಬಾರಿಗೆ ಕ್ಷೇತ್ರದ ಶಾಸಕರನ್ನಾಗಿ ಜನರು ಆಯ್ಕೆ ಮಾಡಿರುವುದು ದುರದೃಷ್ಟಕರ. ಬೈಸಿಕಲ್, ಬಾಣ, ಪೊರಕೆ, ಹಸ್ತ, ಹೂವು ಸೇರಿದಂತೆ ಅನೇಕ ಪರಿಕರಗಳನ್ನು ದೈನಂದಿನ ಬದುಕಿನಲ್ಲಿ ಬಳಕೆ ಮಾಡುತ್ತೇವೆ. ಅವುಗಳಿಗೆ ರಾಜಕೀಯ ಚಿಹ್ನೆಗಳ ಮಹತ್ವ ನೀಡಿ ಕೋಪಿಸಿಕೊಳ್ಳುವುದು ಸರಿಯಲ್ಲ. ಅತ್ಯುತ್ತಮ ನೃತ್ಯ ಪ್ರದರ್ಶನ ಮಾಡಿ ಮೊದಲ ಬಹುಮಾನ ಪಡೆದಿದ್ದ ಚಂದ್ರಶೇಖರ ಭಾರತಿ ಶಾಲೆಯ ಮಕ್ಕಳಿಗೆ ನಾಲ್ಕನೇ ಸ್ಥಾನ ನೀಡಿರುವುದು ಅಕ್ಷಮ್ಯ. ಸಭೆ, ಸಮಾರಂಭಗಳಲ್ಲಿ ಸಂಘ, ಸಂಸ್ಥೆಗಳನ್ನು ಗುತ್ತಿಗೆ ಪಡೆದವರಂತೆ ವರ್ತಿಸುವ ಮೂಲಕ ಶಿಕ್ಷಕಿಯೊಬ್ಬರಿಗೆ ಧಮಕಿ ಹಾಕಿದ್ದಾರೆ. ಸಂವಿಧಾನಿಕ ಮಾನ್ಯತೆಗೆ ದುರ್ವತನೆ ತೋರಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡ ಕೂಡಲೇ ಜನರ ಕ್ಷಮೆಯಾಚನೆ ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ದೂರು: ಕ್ಷೇತ್ರದ ಮತದಾರರು ನೀಡಿರುವ ಆಶೀರ್ವಾದದ ಬಲದಿಂದ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದೇನೆ ಎನ್ನುವುದನ್ನು ಶಿವಲಿಂಗೇಗೌಡ ಮರೆತಿದ್ದಾರೆ. ರಾಷ್ಟ್ರೀಯ ಲಾಂಛನಕ್ಕೆ ಕಮಲ ಚಿಹ್ನೆಗೆ ಅಗೌರವ, ಅಪಮಾನ ಮಾಡಿರುವ ಕೆ.ಎಂ.ಶಿವಲಿಂಗೇಗೌಡರನ್ನು ಶಾಸಕ ಸ್ಥಾನದಿಂದ ವಜಾ ಮಾಡುವಂತೆ ರಾಜ್ಯಪಾಲರು, ವಿಧಾನಸಭಾಧ್ಯಕ್ಷರಿಗೆ ದೂರು ನೀಡಲಾಗುವುದು ಎಂದರು. ಮುಖಂಡರಾದ ಅಣ್ಣಾಯ್ಕನಹಳ್ಳಿ ವಿಜಯಕುಮಾರ್, ಅವಿನಾಶ್ ನಾಯ್ಡು, ರೇಣುಕಪ್ಪ ಸೇರಿದಂತೆ ಹಲವರು ಇದ್ದರು.

30ಎಆರ್‌ಎಸ್1-
ಜಿವಿಟಿ ಬಸವರಾಜ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net