

ತುಮಕೂರು : ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಹಾಗೂ ಸಂಸ್ಕೃತಿ ಬೆಳೆಸಲು ಜಿಲ್ಲೆಯ ಎಲ್ಲ ಗ್ರಾಪಂ ಕನಿಷ್ಠ 5 ಲಕ್ಷ ರೂ. ತಾಪಂ ವ್ಯಾಪ್ತಿಯಲ್ಲಿ 25 ಲಕ್ಷ ಹಾಗೂ ಜಿಪಂ ವ್ಯಾಪ್ತಿಯಲ್ಲಿ 50 ಲಕ್ಷ ರೂ. ಸಾಂಸ್ಕೃತಿಕ ನಿಧಿಯನ್ನಾಗಿ ಮೀಸಲಿಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದರು.
ಗಡಿ ಅಧ್ಯಯನ ವರದಿ ಶಿಫಾರಸಿನ ಮೇರೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಅಧಿನಿಯಮ 2010ರಲ್ಲಿ ಅಸ್ತಿತ್ವಕ್ಕೆ ತಂದಿದೆ. ರಾಜ್ಯದ 19 ಜಿಲ್ಲೆಯ 63 ತಾಲೂಕುಗಳ ಭೌಗೋಳಿಕ ಪ್ರದೇಶಗಳನ್ನು ಗಡಿ ನಾಡೆಂದು ಹಾಗೂ 6 ನೆರೆ ರಾಜ್ಯಗಳಲ್ಲಿನ ಗಡಿಯಲ್ಲಿನ ಕನ್ನಡ ಪರಿಸರದ ಭಾಗಗಳನ್ನು ಸೇರಿಸಿಕೊಂಡು ಆ ಪ್ರದೇಶಗಳನ್ನು ಸಹಾ ಗಡಿ ಭಾಗ ಎಂದು ಗುರುತಿಸಿ ಗಡಿ ಪ್ರದೇಶಗಳನ್ನು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಗೊಳಿಸುವುದು ಪ್ರಾಧಿಕಾರದ ಮೂಲ ಆಶಯ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಡಿ ಭಾಗದಲ್ಲಿರುವ ಸರ್ಕಾರಿ ಸಂಸ್ಥೆಗಳಲ್ಲದೇ, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕನ್ನಡಪರ ಸಂಸ್ಥೆಗಳ ಶಾಲೆಗಳಿಗೆ ಅಗತ್ಯವಾದ ಶಾಲಾ ಕೊಠಡಿ, ಗ್ರಂಥಾಲಯ, ರಸ್ತೆ ಸಂಪರ್ಕ, ಶುದ್ಧ ಕುಡಿಯುವ ಟಕ. ನೀರಿನ ಪೀಠೋಪಕರಣ, ಸಾಂಸ್ಕೃತಿಕ ಭವನ ಹಾಗೂ ಇನ್ನಿತರ ಪೂರಕವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜತೆಗೆ ಈ ಭಾಗದಲ್ಲಿ ಕನ್ನಡಪರ ಸಾಂಸ್ಕೃತಿಕ ವಾತಾವರಣ ಉಂಟು ವಾಡುವುದು, ಕನ್ನಡಪರ ಸಾಹಿತ್ಯ, ಸಂಸ್ಕೃತಿ, ಕಲೆಗಳ ಉತ್ಸವಗಳನ್ನು ಏರ್ಪಡಿಸುವುದು ಪ್ರಾಧಿಕಾರದ ಉದ್ದೇಶ ಎಂದರು.
ಜಿಲ್ಲೆಯ ಮಧುಗಿರಿ, ಶಿರಾ ಹಾಗೂ ಪಾವಗಡ ಸೇರಿ ಮೂರು ತಾಲೂಕುಗಳು ಗಡಿ ಭಾಗದ ವ್ಯಾಪ್ತಿಗೆ ಒಳಪಡಲಿದ್ದು, ಈ ತಾಲೂಕುಗಳಲ್ಲಿನ ಗಡಿ ಪ್ರದೇಶಗಳ ಅಭಿವೃದ್ಧಿಗಾಗಿ ಅಲ್ಲಿನ ಆರ್ಥಿಕ, ಕೈಗಾರಿಕಾ, ಸಾವಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ತುಮಕೂರು ವಿವಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಗೂ ಪೂರ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಗಡಿ ಭಾಗದ ಪ್ರದೇಶಗಳ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಡಾ. ಸಿ. ಸೋಮಶೇಖರ್, ಜಿಲ್ಲೆಯ ಗಡಿಭಾಗದ ಗ್ರಾಮಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳು ತಿಂಗಳಿಗೆ ಒಮ್ಮೆಯಾದರೂ ಭೇಟಿ ನೀಡಿ ಕುಂದುಕೊರತೆ ಆಲಿಸಿ ಜನಸ್ಪಂದನಾ ಸಭೆ ನಡೆಸಿ, ಗಡಿ ಭಾಗದ ಪ್ರದೇಶಗಳ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದರು.
ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಜಿಪಂ ಸಿಇಒ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಮತ್ತಿತರ ಅಧಿಕಾರಿಗಳು ಇದ್ದರು.
ಕೌಶಲಾಭಿವೃದ್ಧಿಗೆ ಒತ್ತು ಕೊಡಿ : ಗಡಿಭಾಗದ ಗ್ರಾಮದ ಶಾಲಾ ಮಕ್ಕಳ ಕೌಶಲಾಭಿವೃದ್ಧಿಗೆ ಒತ್ತು ಕೊಡಬೇಕು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗಡಿಭಾಗದ ಗ್ರಾಮಗಳಲ್ಲಿ 10 ಯುವ ಸಂಗಳನ್ನು ರಚಿಸಿ ಕನ್ನಡ ಕುರಿತ ವಿಚಾರ ಗೋಷ್ಠಿ, ವಿಚಾರ ಸಂಕಿರಣ ನಡೆಸಲು ಹಾಗೂ ಮಹಿಳೆಯರ ಸ್ವಾವಲಂಬನೆಗಾಗಿ ಸಂಟನೆಗಳನ್ನು ರಚಿಸಬೇಕು ಎಂದು ಯುವ ಸಬಲೀಕರಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಡಾ.ಸಿ.ಸೋಮಶೇಖರ್ ಸೂಚಿಸಿದರು.
ಜಿಲ್ಲೆಯ ಗಡಿ ತಾಲೂಕಿನ ಪ್ರದೇಶಗಳ ಅಭಿವೃದ್ಧಿಗಾಗಿ 8.70 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಪ್ರಾಧಿಕಾರದಿಂದ 6.80 ಕೋಟಿ ರೂಪಾಯಿ ಬಿಡುಗಡೆ ವಾಡಲಾಗಿದೆ. ಈ ಪೈಕಿ ವಿವಿಧ ಇಲಾಖೆಗಳು 3.09 ಕೋಟಿ ರೂಪಾಯಿಗೆ ಅನುದಾನ ಬಳಕೆ ಪ್ರವಾಣ ಪತ್ರವನ್ನು ಸಲ್ಲಿಸಿದ್ದು, 3.70 ಕೋಟಿ ರೂಪಾಯಿವರೆಗೂ ಹಣ ಬಳಕೆ ಪ್ರವಾಣ ಪತ್ರ ಸಲ್ಲಿಸಿರುವುದಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಇಲಾಖೆಗಳು ಪೂರ್ಣಗೊಂಡ ಕಾಮಗಾರಿಗಳ ಅನುದಾನ ಬಳಕೆ ಪ್ರವಾಣಪತ್ರಗಳನ್ನು ಕೂಡಲೇ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದರು.