ಪತ್ರಿಕಾ ಮಾಧ್ಯಮ ಸಮಾಜದ ಕನ್ನಡಿ

12 smg 9
ಸೊರಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಹುಸೇನ್ ಸರಕಾವಸ್, ಡಾ.ಪ್ರಭು ಸಾಹುಕಾರ್, ನಾಗರಾಜ ನೇರಿಗೆ, ಸಂತೋಷ ಕಾಚಿನಕಟ್ಟೆ, ಎಸ್.ಜಿ.ರಾಮಚಂದ್ರ, ಟಿ.ರಾಘವೇಂದ್ರ, ದಿನಕರ ಭಟ್ ಭಾವೆ ಇದ್ದರು.
Published on

ಶಿವಮೊಗ್ಗ: ವಿಶ್ವದ ಪ್ರತಿ ವಿಷಯದ ಬಗ್ಗೆ ಮಾಹಿತಿ ನೀಡುವ ಪತ್ರಿಕಾ ಮಾಧ್ಯಮ ಸಮಾಜದ ಕನ್ನಡಿಯಾಗಿ ಕಾರ್ಯನಿರ್ವಹಿಸುವ ಜತೆಗೆ ಆರೋಗ್ಯಕರ ವಿಷಯಗಳ ಗ್ರಹಿಕೆಯಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದು ಸೊರಬ ತಹಸೀಲ್ದಾರ್ ಹುಸೇನ್ ಸರಕಾವಸ್ ಅಭಿಪ್ರಾಯಪಟ್ಟರು.
ಸೊರಬ ತಾಲೂಕು ತಾಲೂಕಿನ ಕೋಟಿಪುರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಧ್ಯಮಗಳು ಸಮಾಜದಲ್ಲಿನ ಸಿಹಿ-ಕಹಿ ಘಟನೆಗಳನ್ನು ನಮಗೆ ತಲುಪಿಸುತ್ತವೆ. ವೈಜ್ಞಾನಿಕ ಚಿಂತನೆಯಿಂದ ವ್ಯಕ್ತಿಯ ಬೆಳವಣಿಗೆಗೆ ಮಾಧ್ಯಮಗಳು ಪೂರಕ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭು ಸಾಹುಕಾರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಪತ್ರಿಕೆಗಳು ಸಮಾಜಮುಖಿಯಾಗಿ ಸಮಾಜದ ಬದಲಾವಣೆಗೆ ಗುರುತರವಾದ ಕೆಲಸ ಮಾಡುತ್ತವೆ. ಸರ್ಕಾರಿ ಅಧಿಕಾರಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾರ್ವಜನಿಕ ಸೇವೆಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂದರು.
ಸೊರಬ ಆರಕ್ಷಕ ವೃತ್ತ ನಿರೀಕ್ಷಕ ಎಲ್.ರಾಜಶೇಖರ, ಪತ್ರಕರ್ತರಾದ ನಾಗರಾಜ ನೇರಿಗೆ, ಸಂತೋಷ್ ಕಾಚಿನಕಟ್ಟೆ, ಟಿ. ರಾಘವೇಂದ್ರ, ಎಸ್.ಜಿ.ರಾಮಚಂದ್ರ, ದಿನಕರ ಭಟ್ ಭಾವೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net