ಪತ್ರಿಕಾ ಸ್ವಾತಂತ್ರ್ಯದಿಂದ ಪ್ರಜಾಪ್ರಭುತ್ವಕ್ಕೆ ಬಲ...

Press Day 1
Published on

ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಅಭಿಮತ

ಉಡುಪಿಯಲ್ಲಿ ಪತ್ರಿಕಾ ದಿನಾಚರಣೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಹದಿನೇಳನೇ ಶತಮಾನದಲ್ಲಿ ಜರ್ಮನ್​ನ ಮತಪ್ರಚಾರಕ ರೆವರೆಂಡ್​ ಹರ್ಮನ್​ ಮೋಗ್ಲಿಂಗ್​ ಅವರು ಪ್ರಥಮ ಬಾರಿಗೆ ಕನ್ನಡದಲ್ಲಿ ಮಂಗಳೂರು ಸಮಾಚಾರ ಎಂಬ ಪತ್ರಿಕೆ ಪ್ರಾರಂಭಿಸಿದರು. ಆ ಕಾಲಕ್ಕೂ ಈಗಿನ ಕಾಲದ ಮಾಧ್ಯಮಕ್ಕೂ ತಾಂತ್ರಿಕವಾಗಿ ಬಹಳ ಬದಲಾವಣೆ ಆಗಿದೆ. ಆದರೆ, ಪತ್ರಿಕಾ ಸ್ವಾತಂತ್ರ್ಯದಿಂದ ಮಾತ್ರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಅಭಿಮತ ವ್ಯಕ್ತಪಡಿಸಿದರು.

Press Day 2
ಉಡುಪಿಯ ಲಯನ್ಸ್​ ಭವನದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿ ಮತ್ತು ಲಯನ್ಸ್​ ಕ್ಲಬ್​ ಉಡುಪಿ ಆಶ್ರಯದಲ್ಲಿ ಜುಲೈ 1ರಂದು ಬೆಳಗ್ಗೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಗೌರವಾರ್ಥ ಸನ್ಮಾನ

ಹಿರಿಯ ಪತ್ರಕರ್ತ ಕುಂಜೂರು ಲಕ್ಷ್ಮೀನಾರಾಯಣ ಕುಂಡಂತಾಯ ಅವರನ್ನು ಪತ್ರಿಕಾ ದಿನಾಚರಣೆಯ ಗೌರವಾರ್ಥವಾಗಿ ಸನ್ಮಾನಿಸಲಾಯಿತು. ವಿಜಯ ಆಚಾರ್ಯ ಉಚ್ಚಿಲ ಪರಿಚಯಿಸಿದರು.

ಮಾಧ್ಯಮ ಕುರಿತು ಉಪನ್ಯಾಸ

ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಮಾಧ್ಯಮ: ಮುಂದಿನ 10 ವರ್ಷಗಳು-ಮೀಡಿಯಾ ಕನ್ವರ್ಜೆನ್ಸ್​, ಎಲ್​ಎಲ್​ಎಂ ಇತ್ಯಾದಿ ವಿಷಯ ಕುರಿತು ಉಪನ್ಯಾಸ ನೀಡಿದರು. ಕೃತಕ ಬುದ್ಧಿಮತ್ತೆ (ಎಐ) ಮತ್ತು ಎಲ್​ಎಲ್​ಎಂಗಳು ಮಾಧ್ಯಮ ಲೋಕದ ಉದ್ಯೋಗಾವಕಾಶವನ್ನು ಶೇ.50 ಕಡಿತ ಮಾಡುವ ಸಾಧ್ಯತೆ ಇದೆ ಎಂದರು. ರಹೀಂ ಉಜರೆ ಪರಿಚಯಿಸಿದರು.

ಪ್ರತಿಭಾ ಪುರಸ್ಕಾರ

ಮಣಿಪಾಲದ ಎಚ್​ಪಿಆರ್​ ಸಂಸ್ಥೆ ಮುಖ್ಯಸ್ಥ ಹರಿಪ್ರಸಾದ ರೈ ಅವರು ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದರು. ಸಂಘದ ಸದಸ್ಯ ಮೈಕಲ್​ ರೋಡ್ರಿಗಸ್​ ಪುರಸ್ಕೃತರ ಪಟ್ಟಿ ವಾಚಿಸಿದರು.

555
ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ, ಲಯನ್ಸ್​ ಕ್ಲಬ್​ ಉಡುಪಿ ಅಧ್ಯಕ್ಷ ದಿನೇಶ ಕಿಣಿ ಅಲೆವೂರು, ಪತ್ರಕರ್ತದ ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ ಮಂಜನಬೈಲು, ಪತ್ರಿಕಾ ಭವನ ಸಮಿತಿ ಸಂಚಾಲಕ ಅಜಿತ ಆರಾಡಿ ಉಪಸ್ಥಿತರಿದ್ದರು.

ಅವನಿಶ್ರೀ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ ಸ್ವಾಗತಿಸಿದರು. ಪತ್ರಕರ್ತೆ ರಾಧಿಕಾ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಸಂಘದ ಕೋಶಾಧಿಕಾರಿ ಉಮೇಶ ಮಾರ್ಪಳ್ಳಿ ವಂದಿಸಿದರು.

ನಮ್ಮ ಎರಡು ಕಣ್ಣುಗಳ ಮೂಲಕ ಎಲ್ಲವನ್ನೂ ನೋಡುತ್ತೇವೆ. ಆದರೆ, ಸಮಾಜದ ಬೆನ್ನಿನ ಹಿಂದೆ ಏನಾಗುತ್ತಿದೆ ಎನ್ನುವುದನ್ನು ಪತ್ರಕರ್ತರು ಮಾತ್ರ ತಿಳಿಸಲು ಸಾಧ್ಯ. ಮಾಧ್ಯಮವೆಂದರೆ ಸಮಾಜದ ಮೂರನೇ ಕಣ್ಣು. ಜೀವನದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಪತ್ರಕರ್ತರ ಜೀವ ಅಮೂಲ್ಯ. ತಾವುಗಳು ಬೌದ್ಧಿಕ ಶಕ್ತಿಯೊಂದಿಗೆ ಶಾರೀರಿಕ ಶಕ್ತಿ ಕಾಪಾಡುವತ್ತ ಗಮನ ಹರಿಸಬೇಕು. | ಅಬೀದ್​ ಗದ್ಯಾಳ. ಅಪರ ಜಿಲ್ಲಾಧಿಕಾರಿ ಪತ್ರಕರ್ತರು ಯಾವ ಸಾಹಿತಿಗಳಿಗೂ ಕಡಿಮೆಯೇನಿಲ್ಲ. ದಿನದ ಸುದ್ದಿ, ವಿಶೇಷ ವರದಿಗಳನ್ನು ಕ್ಷಣಾರ್ಧದಲ್ಲೇ ಬರೆಯುತ್ತಾರೆ. ಹೀಗಾಗಿ ಪತ್ರಕರ್ತರನ್ನು 'ಅವಸರದ ಸಾಹಿತಿ' ಎನ್ನಬಹುದು. ಸಾಹಿತ್ಯ ಲೋಕ ಪತ್ರಕರ್ತರನ್ನೂ ಸಾಹಿತಿಗಳೆಂದು ಸ್ವೀಕರಿಸಬೇಕು. | ಕೆ.ಲಕ್ಷ್ಮೀನಾರಾಯಣ ಕುಂಡಂತಾಯ. ಹಿರಿಯ ಪತ್ರಕರ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net