ಪತ್ರಿಕೆಗಳು ಜನರ ಜೀವನಾಡಿ

20ard01
ಔರಾದ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿದರು. ಸಂಸದ ಸಾಗರ್ ಖಂಡ್ರೆ,ಶಿವಾನಂದ ಮೋಕ್ತೆದಾರ ಇದ್ದರು.
Published on

ಔರಾದ್: ಸಮಾಜದಲ್ಲಿ ಸಮಸ್ಯೆಗಳಿಗೆ ಪತ್ರಿಕೆಗಳು ಸ್ಪಂದಿಸುವ ಮೂಲಕ ಜನರ ಜೀವನಾಡಿಯಾಗಿ ಕೆಲಸ ಮಾಡುತ್ತಿವೆ ಎಂದು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿ, ಸರ್ಕಾರ ಮತ್ತು ಸಮಾಜದ ಕೊಂಡಿಯಾಗಿ ಪತ್ರಿಕೆಗಳು ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.

ಸಂಸದ ಸಾಗರ್ ಖಂಡ್ರೆ ಮಾತನಾಡಿ, ಪತ್ರಿಕಾ ವರದಿಗಳು ಸಮಾಜದ ಕನ್ನಡಿಯಾಗಿದೆ. ಸಮಾಜದಲ್ಲಿ ಪತ್ರಕರ್ತರ ಜವಾಬ್ದಾರಿ ದೊಡ್ಡದು. ಲೇಖನಿಗೆ ಬಹುದೊಡ್ಡ ಗೌರವ ಇದೆ. ಅದನ್ನು ಎಚ್ಚರದಿಂದ ಬಳಸಬೇಕು ಎಂದರು.

ಹಿರಿಯ ಪತ್ರಕರ್ತ ಮನ್ಮಥ ಸ್ವಾಮಿ ಮಾತನಾಡಿದರು. ಸಂಘದ ತಾಲೂಕಾಧ್ಯಕ್ಷ ಶಿವಾನಂದ ಮೋಕ್ತೆದಾರ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ, ತಾಪಂ ಇಒ ಬೀರೇಂದ್ರಸಿಂಗ್ ಠಾಕೂರ್, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಶರಣಪ್ಪ ಚಿಟ್ಮೆ, ಚನ್ನಬಸವ ಮೋಕ್ತೆದಾರ, ಸುನೀಲ ಜಿರೋಬೆ, ಅಮರೇಶ್ವರ ಚಿದ್ರೆ, ಅಮರ ಸ್ವಾಮಿ, ಸುಧೀರ ಪಾಂಡ್ರೆ, ಅಹ್ಮದ್, ರವಿಕುಮಾರ ಮಠಪತಿ, ರಾಚಯ್ಯ ಸ್ವಾಮಿ, ಸೂರ್ಯಕಾಂತ ಎಕಲಾರ, ಶಿವಕುಮಾರ ಸಾದೂರೆ, ಅಲಿಂಪಾಶಾ, ಶಿವಾನಂದ ಬೇಂದ್ರೆ, ಅಂಬಾದಾಸ ಉಪ್ಪಾರ, ಅಂಬಾದಾಸ ನೇಳಗೆ, ರವಿಕುಮಾರ ಸಿಂಧೆ, ರವಿ ವಲ್ಲೇಪುರೆ, ಲಕ್ಷ್ಮಣ ರಾಠೋಡ್, ವಿಶ್ವನಾಥ ಬಿರಾದಾರ್ ಇತರರಿದ್ದರು.

ಪರಮೇಶ್ವರ ವಿಳಾಸಪುರೆ ನಿರೂಪಣೆ ಮಾಡಿದರು. ರಿಯಾಜ್ ಪಾಶಾ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸುಭಾಷ ಬಣಗಾರ ಅವರಿಗೆ ಲೇಖನಿ ತಪಸ್ವಿ, ಹಿರಿಯ ಪತ್ರಕರ್ತ ಭವಾನಿಸಿಂಗ್ ಠಾಕೂರ್ ಅವರಿಗೆ ಚೇತನಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net