

ಮಂಡ್ಯ: ಕೀಲಾರ ಗ್ರಾಮದ ಎಂ.ವಿ.ಎಂ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಫೆ.22ರಂದು ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಶಿಕ್ಷಕ ಹನಿಯಂಬಾಡಿ ರಾಜು ಅವರಿಗೆ ನಿವೃತ್ತಿಯ ಗೌರವ ಸಮರ್ಪಣೆ ಹಾಗೂ ಹಿರಿಯ ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಳಗದ ಸದಸ್ಯ ಕೃಷ್ಣೇಗೌಡ ಹೇಳಿದರು.
ಅಂದು ಬೆಳಗ್ಗೆ 10ಗಂಟೆಗೆ ಆಯೋಜಿಸಿರುವ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಟಿ.ಜವರೇಗೌಡ ವಹಿಸಲಿದ್ದು, ಹನಿಯಂಬಾಡಿ ರಾಜು ಮತ್ತು ದಂಪತಿಯನ್ನು ನಿವೃತ್ತ ಪ್ರಾಂಶುಪಾಲ ಡಾ.ಬಿ.ಕೃಷ್ಣ ಗೌರವಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಳಗದ ಲಂಕೇಶ್, ನಂದೀಶ್, ಚಂದ್ರಶೇಖರ್, ರಾಜಶೇಖರ್, ವೈರಮುಡಿ, ಗಿರೀಶ್ ಇದ್ದರು.