ಸೆ.1ರಂದು ರಾಜ್ಯಮಟ್ಟದ ನೃತ್ಯ ಸ್ಪರ್ಧೆ: ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಮಾಹಿತಿ

Press conference on state level dance competition Mandya
Published on

ಮಂಡ್ಯ: ರೆಬೆಲ್ ಡ್ಯಾನ್ಸ್ ಗ್ರೂಪ್ ವತಿಯಿಂದ ಸೆ.1ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ತಿಳಿಸಿದರು.

ಕಳೆದ 10 ವರ್ಷದಿಂದ ಜಿಲ್ಲಾದ್ಯಂತ ಹಲವಾರು ನೃತ್ಯ ಯುವಜನರಿಗೆ ತರಬೇತಿ ಹಾಗೂ ರೆಬೆಲ್ ಡ್ಯಾನ್ಸ್ ವಿದ್ಯಾರ್ಥಿಗಳಿಂದ ವಿವಿಧ ಶೋಗಳಲ್ಲಿ ಪ್ರದರ್ಶನ ಮಾಡಲಾಗಿದೆ. ನಾಡಹಬ್ಬ ದಸರಾ ಯುವ ಸಂಭ್ರಮ ಮತ್ತು ಯುವ ದಸರಾದಲ್ಲಿ ಪ್ರತಿ ವರ್ಷವೂ ಕಾರ್ಯಕ್ರಮ ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂದು ಬೆಳಗ್ಗೆ 10ಗಂಟೆಗೆ ಸ್ಪರ್ಧಾ ಕಾರ್ಯಕ್ರಮ ಪ್ರಾರಂಭವಾಗಲಿದೆ. ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್, ಕಾಂತಾರ ಸಿನಿಮಾದ ನಟಿ ಸಪ್ತಮಿಗೌಡ, ನೃತ್ಯಂ ಸಂಯೋಜಕ ಮೋಹನ್, ಶಾಸಕರಾದ ರವಿಕುಮಾರ್ ಗಣಿಗ, ಕೆ.ಎಂ.ಉದಯ್, ಪಿ.ಎಂ.ನರೇಂದ್ರಸ್ವಾಮಿ, ಮಧು ಜಿ.ಮಾದೇಗೌಡ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಡಿ.ಸಿ.ತಮ್ಮಣ್ಣ, ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಫಿಟ್‌ನೆಸ್ 11ರ ಮಾಲೀಕ ರೋಹಿತ್ ಅವರು ಸಮಾರಂಭದಲ್ಲಿ ಭಾಗವಹಿಸುವರು ಎಂದರು.

ಸ್ಪರ್ಧೆ ವಿವಿಧ ವಿಭಾಗಗಳಲ್ಲಿ ನಡೆಯಲಿದೆ. ಕ್ರಮವಾಗಿ 25 ಸಾವಿರ ರೂ, 15 ಸಾವಿರ ರೂ, 10 ಸಾವಿರ ರೂ ಹಾಗೂ ಹಿರಿಯರ ವಿಭಾಗದಲ್ಲಿ 3 ಸಾವಿರ ರೂ ಮತ್ತು 2 ಸಾವಿರ ರೂ ಬಹುಮಾನ ಸೇರಿದಂತೆ 1.50 ಲಕ್ಷ ರೂ ಮೊತ್ತದ ಬಹುಮಾನ ನೀಡಲಾಗುವುದು. ಕಿರಿಯರಿಗೆ 1 ಸಾವಿರ ರೂ ಮತ್ತು 2,500 ರೂ ಪ್ರವೇಶಧನ ನಿಗದಿಪಡಿಸಲಾಗಿದೆ. ಈಗಾಗಲೇ 200ಕ್ಕೂ ಹೆಚ್ಚು ತಂಡಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ ಆಯ್ಕೆ ಮಾಡಿ ಸ್ಪರ್ಧೆಗೆ ನಿಯೋಜಿಸಲಾಗುವುದು ಎಂದು ಹೇಳಿದರು.

ಗ್ರೂಪ್‌ನ ಸಂಸ್ಥಾಪಕ ಅರ್ಜುನ್, ಮುಖಂಡರಾದ ಗೋವಿಂದ್, ರೋಹಿತ್, ಪ್ರದೀಪ್, ರಾಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net