ಫೆ.25ರಂದು ಮೆಣಸಗೆರೆಯಲ್ಲಿ ಭಾಷಣ ಸ್ಪರ್ಧೆ: ವಿಶ್ರಾಂತ ಪ್ರಾಧ್ಯಾಪಕ ಬಿ.ಎಸ್.ಬೋರಯ್ಯ ಮಾಹಿತಿ

Press conference on speech competition Mandya
Published on

ಮಂಡ್ಯ: ಮದ್ದೂರು ತಾಲೂಕು ಮೆಣಸಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಅಭಿವೃದ್ಧಿ ಸಮಿತಿಯ ವತಿಯಿಂದ ದಿವಂಗತ ರಾಮಣ್ಣರವರ ಸ್ಮರಣಾರ್ಥ ಫೆ.25ರಂದು ಬೆಳಗ್ಗೆ 10.30ಕ್ಕೆ ಶಾಲೆಯ ಆವರಣದಲ್ಲಿ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಬಿ.ಎಸ್.ಬೋರಯ್ಯ ತಿಳಿಸಿದರು.

ಮುಖ್ಯಶಿಕ್ಷಕಿ ಎಂ.ಎಸ್.ಮಮತಾ ಅಧ್ಯಕ್ಷತೆ ವಹಿಸಲಿದ್ದು, ಭಾರತೀ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಬಿ.ಎಸ್.ಬೋರಯ್ಯ ಸಮಾರಂಭ ಉದ್ಘಾಟಿಸುವರು. ನಿವೃತ್ತ ಮುಖ್ಯ ಶಿಕ್ಷಕ ಎಂ.ಮಾಯಪ್ಪ, ಸಮಿತಿಯ ಮಾಜಿ ಅಧ್ಯಕ್ಷ ಎಂ.ಟಿ.ಮಹೇಶ್ ಉಪಸ್ಥಿತರಿರುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರ್ಯಕ್ರಮದ ಆಯೋಜಕ ಆಲೂರಯ್ಯ ಮಾತನಾಡಿ, ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪುಸ್ತಕವನ್ನು ಓದಿದ ಮಕ್ಕಳು ಕಥೆಯ ರೂಪದಲ್ಲಿ ಅದನ್ನು ಪ್ರಸ್ತುತ ಪಡಿಸುವರು. ಕಥೆಯ ರೂಪದಲ್ಲಿ ಇಲ್ಲವಾದರೂ ಭಾಷಣಕ್ಕೆ ಬದಲಾಯಿಸಿ ವಿವರಿಸುವರು. ಇದರಿಂದಾಗಿ ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿ ಹೆಚ್ಚುವುದಲ್ಲದೇ. ವಿಷಯವನ್ನು ಗ್ರಹಿಸುವ ಹಾಗೂ ವಿವರಿಸಿ ತಿಳಿಸುವ ಕಲೆಯು ಉತ್ತಮವಾಗಲಿದೆ. ಮಕ್ಕಳಿಗಾಗಿಯೇ 10ರಿಂದ 40 ಪುಟಗಳ ಪುಸ್ತಕ ರಚಿಸಲಾಗಿದ್ದು, ಮಕ್ಕಳು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಪುಸ್ತಕ ಆಯ್ದುಕೊಳ್ಳುತ್ತಾರೆ. ಅವುಗಳಲ್ಲಿ ಓದಿದ್ದನ್ನು ಸ್ಪರ್ಧೆಯಲ್ಲಿ ಪ್ರಸ್ತುತ ಪಡಿಸಲು ಸಹಾಯವಾಗುತ್ತದೆ ಎಂದು ವಿವರಿಸಿದರು.

ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಿ.ಸೋಮು, ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net