ಮಾ.4ರಂದು ನಂದಿ ರಥಯಾತ್ರೆ ನಗರ ಪ್ರವೇಶ: ಗೋ ಸಂರಕ್ಷಕ ಹೊಸಹಳ್ಳಿ ಅನಂತರಾವ್ ಮಾಹಿತಿ

Press Conference on Nandi Ratha Yatra Mandya
Published on

ಮಂಡ್ಯ: ರಾಜ್ಯದಲ್ಲಿ ಕಳೆದ ಡಿ.31ರಿಂದ ಮಾ.29ವರೆಗೆ ನಡೆಯುತ್ತಿರುವ ನಂದಿ ರಥಯಾತ್ರೆ ಮಾ.4ರಂದು ಮಂಡ್ಯ ನಗರ ಪ್ರವೇಶಿಸಲಿದ್ದು, ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದು ಗೋ ಸಂರಕ್ಷಕ ಹೊಸಹಳ್ಳಿ ಅನಂತರಾವ್ ತಿಳಿಸಿದರು.

ಸಂಜೆ 4ಗಂಟೆಗೆ ಹೊಸಹಳ್ಳಿಯಲ್ಲಿ ಮಂಗಳವಾದ್ಯ, ವಿವಿಧ ಕಲಾತಂಡಗಳು ಹಾಗೂ ಸ್ಥಳೀಯ ಹಳ್ಳಿಕಾರ್ ನಂದಿಗಳೊಳಗೊಂಡಂತೆ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ. ಹೊಸಹಳ್ಳಿ ವೃತ್ತದಿಂದ ವಿ.ವಿ ರಸ್ತೆ, ಮಹಾವೀರ ವೃತ್ತ, ಜಯಚಾಮರಾಜೇಂದ್ರ ವೃತ್ತ, ಆರ್.ಪಿ ರಸ್ತೆ, ಕೆ.ಆರ್.ರಸ್ತೆಯಲ್ಲಿ ಮೂಲಕ ಸಾಗಿ ರಾಘವೇಂದ್ರ ದೇವಾಲಯದಲ್ಲಿ ಸಮಾಪ್ತಿಗೊಳ್ಳುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಳ್ಳಿಕಾರ್ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿ ಪಟೇಲ್ ಮಾತನಾಡಿ, ಮೆರವಣಿಗೆಯಲ್ಲಿ 25 ಎತ್ತಿನಗಾಡಿಗಳ್ಳುಳ ದೇಸಿ ರಾಸು ಹಾಗೂ 20ಕ್ಕೂ ಹೆಚ್ಚು ಹಳ್ಳಿಕಾರ್ ರಾಸುಗಳು ಪಾಲ್ಗೊಳ್ಳಲಿವೆ. ನಂದಿ ರಥಯಾತ್ರೆಯ ಮೂಲಕ ದೇಸಿ ತಳಿಗಳನ್ನು ಉಳಿಸಿಕೊಳ್ಳುವುದರ ಜತೆಗೆ ವಿವಿಧ ಪ್ರಾಂತ್ಯಗಳ ದೇಸಿ ತಳಿಗಳ ಗಂಡು ರಾಸುಗಳನ್ನು ರಕ್ಷಿಸಿ, ಅವುಗಳ ಮೂತ್ರ ಹಾಗೂ ಸಗಣಿಯ ಮೂಲಕ ಉತ್ಪನ್ನಗಳನ್ನು ತಯಾರಿಸಿ ಲಾಭದಾಯಕ ಮಾರ್ಗವನ್ನು ಕಂಡುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ವಿವರಿಸಿದರು.

ಸೋಮಶೇಖರ್, ಮಂಚೇಗೌಡ, ರಾಮಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net