ಅ.14ರಂದು ಸಾಮೂಹಿಕ ಸರಳ ವಿವಾಹ: ಅಂಬೇಡ್ಕರ್ ವಾರಿಯರ್ಸ್ ಅಧ್ಯಕ್ಷ ಗಂಗಾರಾಜು ಹೇಳಿಕೆ

Press Conference on Mass Simple Marriage Mandya
Published on

ಮಂಡ್ಯ: ಬುದ್ಧ ಭಾರತ ಫೌಂಡೇಷನ್ ವತಿಯಿಂದ ವಿವಿಧ ಇಲಾಖೆ ಸಹಯೋಗದಲ್ಲಿ ಅ.14ರಂದು ಶ್ರೀರಂಗಪಟ್ಟಣ ತಾಲೂಕು ನೇರಲಕೆರೆ ಗ್ರಾಮದಲ್ಲಿ ಉಚಿತ ಸಾಮೂಹಿಕ ಸರಳ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಅಂಬೇಡ್ಕರ್ ವಾರಿಯರ್ಸ್ ಅಧ್ಯಕ್ಷ ಗಂಗಾರಾಜು ತಿಳಿಸಿದರು.

ಅ.14ರಂದು ಅಂಬೇಡ್ಕರ್ ಅವರು ಬೌದ್ಧ ಧಮ್ಮ ದೀಕ್ಷೆ ಪಡೆದ ದಿನ. ಹಾಗಾಗಿ ಅದರ ನೆನಪಿಗಾಗಿ ಬುದ್ಧ ಧಮ್ಮವನ್ನು ಪ್ರತಿ ಮನೆ ಮನೆಗೆ ತಲುಪಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯದ ಯಾವುದೇ ಜಿಲ್ಲೆಯಲ್ಲಿರುವ ವಧು-ವರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ವಧು ವರರು ವಯಸ್ಕರಾಗಿರಬೇಕು. ಆಧಾರ್ ಕಾರ್ಡ್, ವಯಸ್ಸಿನ ದೃಢೀಕರಣ ಪತ್ರ, ಇತ್ತೀಚಿನ ಮೂರು ಭಾವಚಿತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರವನ್ನು ಅ.10ರೊಳಗೆ ಬುದ್ಧ ಭಾರತ ಫೌಂಡೇಷನ್, ಸುಂದರಪ್ಪ ಬಿಲ್ಡಿಂಗ್, ಸುಭಾಷ್‌ನಗರ 8ನೇ ಕ್ರಾಸ್, ಮಂಡ್ಯ-571 401 ಇಲ್ಲಿಗೆ ತಲುಪಿಸಬೇಕು ಎಂದರು.

ಫೌಂಡೇಷನ್ ಅಧ್ಯಕ್ಷ ಜೆ,ರಾಮಯ್ಯ, ಲೋಕೇಶ್, ಅಮ್ಜದ್ ಪಾಷಾ, ಜವರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net