

ಮಂಡ್ಯ: ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜು.30ರಂದು ನಗರದ ರೈತ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಹಾಗೂ ಸಂಘದ ಸದಸ್ಯರಿಗೆ ಭತ್ತದ ಬಿತ್ತನೆ ಬೀಜ ವಿತರಣಾ ಸಮಾರಂಭ ಆಯೋಜಿಸಲಾಗಿದೆ ಎಂದು ಮನ್‌ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ತಿಳಿಸಿದರು.
ಅಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಂಡಿರುವ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಮಹಾಪೋಷಕ ಎಚ್.ಸಿ.ಕಾಳೇಗೌಡ ವಹಿಸುವರು. ಮನ್‌ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಉದ್ಘಾಟಿಸುವರು. ಸಂಘದ ಕಾರ್ಯದರ್ಶಿ ಸತ್ಯಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡುವರು. ಕಾರ್ಯಾಧ್ಯಕ್ಷ ವಸಂತರಾಜು, ಆರ್‌ಎಪಿಸಿಎಂಎಸ್ ಅಧ್ಯಕ್ಷ ಶೇಖರ್, ಸ್ಕಂದ ಡೆವಲಪರ್ಸ್‌ನ ಎಂ.ಪಿ. ಶ್ರೀಕಾಂತ್, ಶಂಭುಸೇವಾ ಟ್ರಸ್ಟ್ ಕಾರ್ಯದರ್ಶಿ ಬಿ.ಆರ್.ಸುರೇಶ್, ಗ್ರಾ.ಪಂ ಮಾಜಿ ಸದಸ್ಯ ಕೆ.ರವಿ, ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದೇ ವೇಳೆ ತೋಟಗಾರಿಕೆ ಉಪನಿರ್ದೇಶಕ ಕೆ.ರುದ್ರೇಶ್, ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಆಲಕೆರೆ ಘಟಕದ ಅಧ್ಯಕ್ಷ ಎ.ಎಸ್.ಚಂದ್ರು, ಕೃಷಿಕ ಬಂದು ಗೌರಮ್ಮ, ಸಮಾಜ ಸೇವಕ ಕೆ.ವಿ.ತ್ಯಾಗರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಸಂಘದ ಸದಸ್ಯರಿಗೆ 5 ಕೆ.ಜಿ ಬಿತ್ತನೆ ಭತ್ತದ ಚೀಲವನ್ನು ವಿತರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ರೈತರಿಂದಲೇ ಉತ್ತಮ ತಳಿಯ ಭತ್ತವನ್ನು ಸಂಗ್ರಹಿಸಿ ವಿತರಿಸಲು ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.
ಸಂಘದ ಪದಾಧಿಕಾರಿಗಳಾದ ವಸಂತರಾಜು, ಪ್ರಸನ್ನಕುಮಾರ್, ಎನ್.ಎಸ್.ಸತ್ಯಮೂರ್ತಿ, ರಾಕೇಶ್, ರವಿಕುಮಾರ್ ಇತರರಿದ್ದರು.